

ಬೆಳಗಾವಿ: ಖಾನಾಪುರ ತಾಲೂಕಿನ ಅರಣ್ಯ ಪ್ರದೇಶ ಸೇರಿ ರಾಜ್ಯದ ವಿವಿಧೆಡೆ ಆದಿವಾಸಿ ಹಕ್ಕಿಪಿಕ್ಕಿ ಜನಾಂಗವನ್ನು ಒಕ್ಕಲೆಬ್ಬಿಸುವ ಕೆಲಸ ನಡೆದಿದ್ದು, ಇಂತಹ ಕ್ರಮದ ಬದಲು ವಸತಿ ಸೇರಿ ಇತರ ಮೂಲಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ದಲಿತ ಸಂರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತ ಗಡ್ಡೆ&ಗೆಣಸು ತಿನ್ನುತ್ತ ಜೀವನ ಸಾಗಿಸುತ್ತಿದ್ದ ಹಕ್ಕಿಪಿಕ್ಕಿ ಜನಾಂಗದವರನ್ನು ಅರಣ್ಯ ಕಾಯ್ದೆ ನೆಪವೊಡ್ಡಿ ಒಕ್ಕೆಲೆಬ್ಬಿಸಲಾಗುತ್ತಿದೆ. ಆದರೆ ಅವರಿಗೆ ವಸತಿ ಸೌಲಭ್ಯವಿಲ್ಲದ್ದರಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೊದಲು ವಸತಿ ಮತ್ತು ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಖಾನಾಪುರ ತಾಲೂಕಿನ ಅರಣ್ಯ ಭಾಗದಲ್ಲಿ ಅಧಿಕಾರಿಗಳು ಇಲ್ಲಸಲ್ಲದ ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ. ಇಷ್ಟು ದಿನ ಇದ್ದ ಜಾಗವನ್ನು ಬಿಡಿಸಿ ಒಕ್ಕಲೆಬ್ಬಿಸುತ್ತಿರುವುದರಿಂದ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ. ಕೂಡಲೇ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ಕೊಡುವಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ನಾಗೇಶ ಅಡಿವೇಶಿ, ತುಳಸಾಬಾಯಿ ಅಡಿವೇಸಿ, ರಾಕೇಶ ಅಡಿವೇಸಿ, ಜನಾಬಾಯಿ, ಸುಗಂಧಾ, ಬಬನ್ ಇತರಿದ್ದರು.