ಬಳ್ಳಾರಿ ; ರಾಜ್ಯದ ಎಲ್ಲ ಜನತೆಗೆ ಸಮ ಪಾಲು ಸಮ ಬಾಳು ಎಂಬಂತೆ ನದಾಫ್ ಸಮುದಾಯಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ನದಾಫ್ -ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಪಿ.ಮೌಲಾಲಿ ಹೇಳಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪಿಂಜಾರ ಸಮುದಾಯವು ಸಮಾರು 25 ಲಕ್ಷ ಜನಸಂಖ್ಯೆಯಿದ್ದಾರೆ. ನಮ್ಮ ಸಮಾಜದವರು ಅರೆ ಅಲೆಮಾರಿಗಳಾಗಿದ್ದು ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿರುತ್ತದೆ. ಅತ್ಯಂತ ಹಿಂದುಳಿದ ಸಮಾಜವೆಂದು ಸರ್ಕಾರ ಗುರುತಿಸಿ 1993ರಲ್ಲಿ ವೃತ್ತಿ ಆಧಾರದ ಮೇಲೆ ಪ್ರವರ್ಗ-1ರಲ್ಲಿ ಮೀಸಲಾತಿ ನೀಡಲಾಗಿದೆ. ಪ್ರವರ್ಗ-1ರಲ್ಲಿ ಇತರೆ 117 ಉಪ ಜಾತಿಗಳು ಬರುವುದರಿಂದ ಈ ಮೀಸಲಾತಿಯ ಆಧಾರದಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗುವುದು ಕಷ್ಟಸಾಧ್ಯವಾಗಿರುತ್ತದೆ. ಆದ್ದರಿಂದ, ನದಾಫ್ ಜನಾಂಗರದವರು ಈವರೆಗೂ ಕೆಎಎಸ್ ಹುದ್ದೆಗೆ ಆಯ್ಕೆಯಾಗಿರುವುದಿಲ್ಲ. ಸಂಘದ ವತಿಯಿಂದ ಸತತವಾಗಿ ಹಲವು ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದರೂ ಸಮುದಾಯದ ಬೇಡಿಕೆ ಈಡೇರಿಲ್ಲ. ಈ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಬಿ.ಪಿ.ಮಹಮ್ಮದ್ ಸಾಬ್, ಸುಳವಾಯಿ ನಬೀಸಾಬ್, ಟಿ.ನೂರ್‌ಬಾಷಾ, ಪಿ.ಜಾನಿಸಾಬ್, ಪಿ.ವಲಿಸಾಬ್, ಹೊನ್ನುರ್‌ಸಾಬ್, ರಂಜಾನ್ ಸಾಬ್ ಇದ್ದರು.