ಮ.ಬೆಟ್ಟಕ್ಕೆ ಬರುವ ಭಕ್ತರಿಗೆ ಸೌಕರ್ಯ ಕಲ್ಪಿಸಿ

13 HANUR 3
ಮಲೆಮಹದೇಶ್ವರ ಬೆಟ್ಟದ ದಾಸೋಹ ಭವನಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ, ಪರಿಶೀಲಿಸಿದರು. ಚಂದ್ರಶೇಖರ್, ಸೆಲ್ವ ಗಣಪತಿ, ವಿಜಯಕುಮಾರ್, ರಾಜು ಇತರರು ಇದ್ದರು.
Published on

ಹನೂರು: ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವುದರಲ್ಲಿ ಕಿಂಚಿತ್ತೂ ಕೊರತೆಯಾಗದಂತೆ ಮುತುರ್ವಜಿ ವಹಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಶಾಸಕರು, ದಾಸೋಹ ಭವನ, ಶೌಚಗೃಹ, ಅಂತರಗಂಗೆ ಹಾಗೂ ಇತರೆಡೆ ತೆರಳಿ ಪರಿಶೀಲಿಸಿ ಮಾತನಾಡಿದರು.

ಆಷಾಢ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ. ಆದ್ದರಿಂದ ದಾಸೋಹ ವ್ಯವಸ್ಥಿತವಾಗಿರಬೇಕು. ಪ್ರಸಾದ ರುಚಿ ಹಾಗೂ ಶುಚಿಯಿಂದ ಕೂಡಿರುವ ಮೂಲಕ ಗುಣಮಟ್ಟ ಕಾಯ್ದಕೊಳ್ಳಬೇಕು. ಸುತ್ತಮುತ್ತಲಿನ ವಾತಾವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಶೌಚಗೃಹದಲ್ಲಿ ಸಿಬ್ಬಂದಿ ನಿಯೋಜಿಸಿ ಶುಚಿತ್ವಕ್ಕೆ ಒತ್ತು ನೀಡಬೇಕು. ದುಸ್ಥಿತಿಯಲ್ಲಿರುವುದನ್ನು ದುರಸ್ತಿಪಡಿಸಿ ಭಕ್ತರಿಗೆ ಉತ್ತಮ ಸೇವೆ ಒದಗಿಸಬೇಕು. ಇನ್ನು ವಿವಿಧ ಸೇವೆಗಳಲ್ಲಿ ಭಾಗಿಯಾಗುವ ಭಕ್ತರು ಅಂತರಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಹಾಗಾಗಿ ಈ ಮಾರ್ಗದಲ್ಲಿ ಹೆಚ್ಚಿನ ಭಕ್ತರು ಸಂಚರಿಸುತ್ತಾರೆ. ಆದ್ದರಿಂದ ಸುಸಜ್ಜಿತ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಇಂಜಿನಿಯರ್ ಸೆಲ್ವ ಗಣಪತಿ, ಮುಖಂಡರಾದ ವಿಜಯಕುಮಾರ್, ಡಿ.ಕೆ.ರಾಜು, ಮಾದೇಶ್, ಸುರೇಶ್, ಮಹದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net