ದಿನಕ್ಕೆ 12 ತಾಸು ವಿದ್ಯುತ್ ಪೂರೈಕೆ ಮಾಡಿ

ಸಿಂಧನೂರಿನ ಪಿಡಬ್ಲ್ಯುಡಿಕ್ಯಾಂಪ್ ಜೆಸ್ಕಾಂ ಕಚೇರಿಯಲ್ಲಿ ಇಇ ಜಿ.ವಿಷ್ಣು ಅವರೊಂದಿಗೆ ಬಿಜೆಪಿ ಮುಖಂಡ ಕೆ.ಕರಿಯಪ್ಪ ನೇತೃತ್ವದಲ್ಲಿ ರೈತರು ಚರ್ಚೆ ನಡೆಸಿದರು. ಪ್ರಮುಖರಾದ ನರೇಶ್ ರಾಮಕ್ಯಾಂಪ್, ಮಲ್ಲಿ ಕಾರ್ಜುನ, ರಾಜು ಅಡವಿಬಾವಿ ಇತರರಿದ್ದರು.
ಸಿಂಧನೂರಿನ ಪಿಡಬ್ಲ್ಯುಡಿಕ್ಯಾಂಪ್ ಜೆಸ್ಕಾಂ ಕಚೇರಿಯಲ್ಲಿ ಇಇ ಜಿ.ವಿಷ್ಣು ಅವರೊಂದಿಗೆ ಬಿಜೆಪಿ ಮುಖಂಡ ಕೆ.ಕರಿಯಪ್ಪ ನೇತೃತ್ವದಲ್ಲಿ ರೈತರು ಚರ್ಚೆ ನಡೆಸಿದರು. ಪ್ರಮುಖರಾದ ನರೇಶ್ ರಾಮಕ್ಯಾಂಪ್, ಮಲ್ಲಿ ಕಾರ್ಜುನ, ರಾಜು ಅಡವಿಬಾವಿ ಇತರರಿದ್ದರು.
Published on

ಸಿಂಧನೂರು: ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ತಾಲೂಕಿನ ಮಾವಿನಮಡು, ರಾಮಕ್ಯಾಂಪ್, ಗೊಬ್ಬರಕಲ್ ಹಾಗೂ ರೌಡಕುಂದಾ ಗ್ರಾಮದ ರೈತರು ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ನೇತೃತ ್ವದಲ್ಲಿ ಬುಧವಾರ ನಗರದ ಪಿಡಬ್ಲ್ಯುಡಿಕ್ಯಾಂಪ್ ಜೆಸ್ಕಾಂ ಕಚೇರಿಯಲ್ಲಿ ಇಇ ಜಿ.ವಿಷ್ಣು ಅವರನ್ನು ಭೇಟಿಯಾಗಿ ಮನವಿ ಮಾಡಿದರು.

ಕೆ.ಕರಿಯಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಸದ ಕಾರಣ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಖಂಡನೀಯ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ದಿನಕ್ಕೆ 12 ಗಂಟೆ ವಿದ್ಯುತ್ ಪೂರೈಸಬೇಕು. ನಿರ್ಲಕ್ಷೃ ಮಾಡಿದರೆ ರೈತರೊಂದಿಗೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಇಇ ಜಿ.ವಿಷ್ಣು ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು ಪ್ರಮುಖರಾದ ನರೇಶ್ ರಾಮಕ್ಯಾಂಪ್, ಮಲ್ಲಿಕಾರ್ಜುನ, ರಾಜು ಅಡವಿಬಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net