ಏಳು ತಾಸು ನಿರಂತರ ವಿದ್ಯುತ್ ಪೂರೈಸಿ

Untitled design (1)
ಕನಕಗಿರಿ ತಾಲೂಕಿನ ನವಲಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಕಾರಟಗಿ ಜೆಸ್ಕಾಂ ಎಇ ದುರ್ಗಪ್ಪ ಭಜಂತ್ರಿಗೆ ಮನವಿ ಸಲ್ಲಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ, ಗ್ರಾಮಸ್ಥರಾದ ವೀರೇಶ ನಾಗವಂಶಿ, ದುರ್ಗಪ್ಪ, ಶರಣಪ್ಪ, ಚಂದ್ರಪ್ಪ ಇತರರಿದ್ದರು.
Published on

ಕನಕಗಿರಿ: ತಾಲೂಕಿನ ನವಲಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಕಾರಟಗಿ ಜೆಸ್ಕಾಂ ಎಇ ದುರ್ಗಪ್ಪ ಭಜಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು.


ನವಲಿ ಗ್ರಾಪಂ ಮಾಜಿ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ಮಾತನಾಡಿ, ಪ್ರಸಕ್ತ ವರ್ಷದ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬರ ಪರಿಸ್ಥಿತಿ ಎದುರಾಗಿದೆ. ಎಲ್ಲ ಬೆಳೆ ಒಣಗಿದ್ದು, ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿಯೇ ಆಸರೆಯಾಗಿದೆ. ಆದರೆ, 7 ತಾಸು ಇದ್ದ ವಿದ್ಯುತ್ ಪೂರೈಕೆಯನ್ನು 5 ತಾಸು ಕೊಡಿ ಎಂದು ಮೇಲಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆಂದು ಅಧಿಕಾರಿಗಳು ಮತ್ತು ಲೈನ್ ಮೆನ್‌ಗಳು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರೈತ ದೇಶದ ಬೆನ್ನೆಲುಬು ಎಂಬುದು ಭಾಷಣಕ್ಕೆ ಸೀಮಿತವಾಗಿದೆ. ಪದೇ ಪದೆ ವಿದ್ಯುತ್ ಕಡಿತಗೊಳಿಸದೇ ಹಗಲಿನಲ್ಲಿ 7 ತಾಸು ವಿದ್ಯುತ್ ಪೂರೈಸಬೇಕು. ಬೆಳಗ್ಗೆ 6 ರಿಂದ 12 ಗಂಟೆವರೆಗೆ ಸಮಯ ನಿಗದಿಪಡಿಸಬೇಕು. ಸಮರ್ಪಕವಾಗಿ ವಿದ್ಯುತ್ ಪೂರೈಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮಸ್ಥರರಾದ ವೀರೇಶ ನಾಗವಂಶಿ, ದುರ್ಗಪ್ಪ, ಶರಣಪ್ಪ, ಚಂದ್ರಪ್ಪ, ಸಂಗಯ್ಯ, ರಾಮಲಿಂಗಪ್ಪ, ರಮೇಶ, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net