ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಿ

Ujjini Award
ನಿಂಬಳಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮಾಜಿಕ ಪರಿಶೋಧನೆ ಹಾಗೂ ಪಾಲಕರ ಸಭೆಯನ್ನು ಎಸ್ಡಿಎಂಸಿ ಅಧ್ಯಕ್ಷ ಬಿ. ಅಶೋಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಎಂ.ಹೇಮಾವತಿ, ಗ್ರಾಪಂ ಉಪಾಧ್ಯಕ್ಷ ಪಾಲಾಕ್ಷಿ, ಸದಸ್ಯರಾದ ಶ್ರೀಕಾಂತ, ಜಿಲಾನ್ ಬಾಷಾ, ಸುರೇಶ್, ಗಣೇಶ್ ರಾವ್, ಶಿಕ್ಷಕರಾದ ಕೊಟ್ರೇಶ್, ಅಶ್ವಿನಿ ಇತರರಿದ್ದರು.
Published on

ಉಜ್ಜಿನಿ: ಸಮೀಪದ ನಿಂಬಳಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಸಾಮಾಜಿಕ ಪರಿಶೋಧನೆ ಹಾಗೂ ಪಾಲಕರ ಸಭೆ ಸೋಮವಾರ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿ ಎಂ.ಹೇಮಾವತಿ ಮಾತನಾಡಿ, ಶಾಲೆಯಲ್ಲಿ ಶಾಲಾ ಪರಿಸರ ಹಾಗೂ ಶಿಕ್ಷಣ ಗುಣಮಟ್ಟ ಉತ್ತಮವಾಗಿದೆ. ಆದರೆ, ಕುಡಿಯಲು ಶುದ್ಧ ನೀರು ಹಾಗೂ ಮಕ್ಕಳ ಸಹಾಯವಾಣಿಯ ಕೊರತೆ ಕಾಣುತ್ತಿದ್ದು, ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಶಿಕ್ಷಕ ಸಿದ್ದೇಶ ಮಾತನಾಡಿ, ಶಾಲೆಯಲ್ಲಿ ಮೂರು ಕೊಠಡಿಗಳ ಅವಶ್ಯಕತೆ ಇದೆ. ವಿಜ್ಞಾನ ಪ್ರಯೋಗಾಲಯ ಇಲ್ಲ. ಮುಖ್ಯಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯೂ ಇದೆ ಎಂದು ತಿಳಿಸಿದರು.

ಎಸ್ಡಿಎಂಸಿ ಅಧ್ಯಕ್ಷ ಬಿ. ಅಶೋಕ, ಗ್ರಾಪಂ ಉಪಾಧ್ಯಕ್ಷ ಪಾಲಾಕ್ಷಿ, ಸದಸ್ಯರಾದ ಶ್ರೀಕಾಂತ, ಜಿಲಾನ್ ಬಾಷಾ, ಸುರೇಶ್, ಗಣೇಶ್ ರಾವ್, ಶಿಕ್ಷಕರಾದ ಕೊಟ್ರೇಶ್, ಅಶ್ವಿನಿ, ಪವಿತ್ರಾ, ಸ್ವಾತಿ, ಲೆಕ್ಕ ಪರಿಶೋಧಕರಾದ ಆರ್. ಶ್ಯಾಮರಾವ್, ಬಿ. ರೇಖಾ, ಕೊಟ್ರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net