ಮಕ್ಕಳಿಗೆ ಶಿಕ್ಷಣದ ಜತೆ ಸವಲತ್ತು ನೀಡಿ

 ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಭೇಟಿ ನೀಡಿ ಇಲ್ಲಿನ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು. ಉಪ ಪ್ರಾಂಶುಪಾಲ ನಂಜುಂಡಯ್ಯ ಸೇರಿದಂತೆ ಇತರರು ಇದ್ದರು.
ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಭೇಟಿ ನೀಡಿ ಇಲ್ಲಿನ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು. ಉಪ ಪ್ರಾಂಶುಪಾಲ ನಂಜುಂಡಯ್ಯ ಸೇರಿದಂತೆ ಇತರರು ಇದ್ದರು.
Published on

ಯಳಂದೂರು: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಸೇರಿದಂತೆ ಯರಿಯೂರು, ಸಂತೆಮರಹಳ್ಳಿ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ವೆಂಕಟೇಶ್ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಲೆಯಿಂದ ಯಾವುದೇ ಕಾರಣಕ್ಕೂ ಯಾವ ಮಗುವೂ ಹೊರಗುಳಿಯದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು. ಕಬ್ಬು ಕಟಾವು ಮಾಡುವ, ಇತರೆ ಕೂಲಿ ಕೆಲಸಕ್ಕೆ ವಲಸೆ ಬರುವ ಮಕ್ಕಳಿಗೆ ಶಿಕ್ಷಣ, ಊಟ ಸೇರಿದಂತೆ ಇತರ ಸಲವತ್ತುಗಳನ್ನು ನೀಡಬೇಕು. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಕಾಳಜಿ ವಹಿಸಬೇಕು. ಅಂಗನವಾಡಿ, ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಲಭಿಸುವ ಎಲ್ಲ ಸವಲತ್ತುಗಳನ್ನು ಸರಿಯಾಗಿ ನೀಡಬೇಕು ಎಂದು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.

ಜಿಲ್ಲಾ ನೋಡಲ್ ಅಧಿಕಾರಿ ಮಹೇಶ್, ಟಿಪಿಒ ಶಾಂತರಾಜು, ಬಿಆರ್‌ಪಿ ಸತೀಶ್, ನಂಜುಂಡಸ್ವಾಮಿ, ಸಿಆರ್‌ಪಿ ಶಶಿರೇಖಾ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net