ಹಳ್ಳಿಗಳಿಗೆ ಬಸ್ ಸೌಕರ್ಯ ಕಲ್ಪಿಸಿ

snd manavi
ಸಿಂಧನೂರಿನಲ್ಲಿ ಡಿಪೋ ವ್ಯವಸ್ಥಾಪಕ ಹೊನ್ನಪ್ಪಗೆ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ಸಂತೋಷ ತ್ಯಾಪ್ಲಿ, ಮಹಾಲಿಂಗ ದೊಡ್ಮನೆ, ಎಚ್.ವಿರೂಪಾಕ್ಷಗೌಡ, ಯಂಕಪ್ಪ ಕೆಂಗಲ್ ಇತರರಿದ್ದರು.
Published on

ಸಿಂಧನೂರು: ತಾಲೂಕಿನ ಕಲ್ಲೂರು, ಮುಳ್ಳೂರು, ಬೂತಲದಿನ್ನಿ, ಮುಳ್ಳೂರು ಕ್ಯಾಂಪಿಗೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಡಿಪೋ ವ್ಯವಸ್ಥಾಪಕ ಹೊನ್ನಪ್ಪಗೆ ಮನವಿ ಸಲ್ಲಿಸಿದರು.

ಈ ಊರುಗಳಲ್ಲಿ ಮಸ್ಕಿ ಕಡೆಗೆ ಹೋಗುವ ಬಸ್‌ಗಳನ್ನೂ ನಿಲ್ಲಿಸುವುದಿಲ್ಲ. ಹೀಗಾಗಿ ಖಾಸಗಿ ಆಟೋ, ಟೆಂಪೋ ಹತ್ತಿ ಶಾಲಾ ಕಾಲೇಜುಗಳಿಗೆ ಬರಬೇಕಾಗಿದೆ. ಪ್ರತಿದಿನ 30 ರಿಂದ 40 ರೂ. ಖರ್ಚಾಗಲಿದೆ. ನಾವು ಬಡವರು, ಪ್ರತಿ ದಿನ ದುಡ್ಡು ಕೊಟ್ಟು ಬರಲು ಕಷ್ಟವಾಗುತ್ತಿದೆ. ಹೀಗಾಗಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಗೆ ಬಸ್ ಬಿಡುವ ಮೂಲಕ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು.

ವಿದ್ಯಾರ್ಥಿನಿಯರು ಬಹಳ ಇರುವುದರಿಂದ ರಾತ್ರಿ 8 ಗಂಟೆಗೆ ಒಂದು ಬಸ್ ಇದೆ. ಅಲ್ಲಿವರೆಗೆ ಕಾದು ಕುಳಿತು ಊರಿಗೆ ತಲುಪಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮುಳ್ಳೂರು ಕ್ಯಾಂಪಿಗೆ ದಿನದಲ್ಲಿ 4 ಬಾರಿ ಬಸ್ ಸಂಚಾರಕೆ ್ಕ ವ್ಯವಸ್ಥೆ ಮಾಡಿಕೊಡಬೇಕು. ಜತೆಗೆ ಸಾಲಗುಂದಾ, ಕೆಂಗಲ್ ಹಳ್ಳಿಯ ವಿದ್ಯಾರ್ಥಿಗಳಿಗೂ ಸಮಯಕ್ಕೆ ಸರಿಯಾಗಿ ಬಸ್ ಬಿಡಬೇಕು ಎಂದು ಒತ್ತಾಯಿಸಿದರು.

ಎಸ್‌ಎಫ್‌ಐ ಸದಸ್ಯ ರಾದ ಸಂತೋಷ ತ್ಯಾಪ್ಲಿ, ಮಹಾಲಿಂಗ ದೊಡ್ಮನೆ, ಕೆಪಿಆರ್‌ಎಸ್ ಅಧ್ಯಕ್ಷ ಎಚ್.ವಿರೂಪಾಕ್ಷಗೌಡ, ಕಾರ್ಮಿಕ ಮುಖಂಡರಾದ ಯಂಕಪ್ಪ ಕೆಂಗಲ್, ಅಪ್ಪಣ್ಣ ಕಾಂಬಳೆ, ವಿದ್ಯಾ ರ್ಥಿನಿಯರಾದ ದುರಗಮ್ಮ ಕಲ್ಲೂರು, ಅಂಬಮ್ಮ, ಲಕ್ಷ್ಮೀ, ಉಮಾ ಕಲ್ಲೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net