ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಲಿ

FotoJet 222
Published on

ನರಸಾಪುರ ಗ್ರಾಪಂ ಅಧ್ಯಕ್ಷ ಕುವಾರ್ ಒತ್ತಾಯ

ನರಸಾಪುರ: ಸತತ ಮಳೆಯಿಂದ ನಷ್ಟ ಆದಂತಹ ರೈತರ ಬೆಳೆಗಳಿಗೆ ಜಿಲ್ಲಾಡಳಿತ ಪರಿಹಾರ ಒದಗಿಸಬೇಕು ಎಂದು ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುವಾರ್ ಒತ್ತಾಯಿಸಿದರು.

ಶುಕ್ರವಾರ ರಾತ್ರಿ ನೀರು ಹರಿದು ನಷ್ಟ್ಟವಾಗಿರುವ ಕೃಷಿ ಜಮೀನುಗಳ ಭೇಟಿ ನೀಡಿ, ಪರಿಶೀಲಿಸಿ ವಾತನಾಡಿದ ಅವರು, ಕೆ.ಸಿ ವ್ಯಾಲಿ ಯೋಜನೆಯ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ 3 ವಷರ್ಗಳ ಹಿಂದೆ ಇದೇ ಸಮಸ್ಯೆ ಉಂಟಾಗಿ ಅನೇಕ ರೈತರು ನಷ್ಟ ಅನುಭವಿಸಿದರು. ಮತ್ತೆ ಅದೇ ರೀತಿ ಈಗ ಮಳೆಯ ನೀರು ಮತ್ತು ವ್ಯಾಲಿ ನೀರು ಎರಡು ಜೋಡಣೆಯಾಗಿ ಹರಿದ ಪರಿಣಾಮ ರೈತರ ಜಮೀನುಗಳಿಗೆ ನೀರು ನುಗ್ಗಿ, ಸುವಾರು 200 ರಿಂದ 250 ಎಕರೆ ಕೃಷಿ ಭೂಮಿಯಲ್ಲಿ ಬೆಳೆದಂತ ತರಕಾರಿ ಬೆಳೆಗಳು ನಷ್ಟವಾಗಿದ್ದು, ರೈತರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ ಎಂದರು.

ರಾಜ್ಯ ರೈತ ಸಂ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ವಾತನಾಡಿ, ಕೆ.ಸಿ ವ್ಯಾಲಿ ಯೋಜನೆಯ ಸಿವಿಲ್ ಇಂಜಿನಿಯರ್‌ಗಳು ಕಾಮಗಾರಿ ವಾಡುವ ಸಂದರ್ಭದಲ್ಲಿ ಸಣ್ಣ ಕಾಲುವೆ ನಿರ್ವಾಣ ವಾಡಿದ್ದು, ಮುಂದಾಲೋಚನೆ ಕ್ರಮವಹಿಸಿಲ್ಲ. ಭಾರಿ ಮಳೆ ಬಂದಾಗ ಯಥೇಚ್ಛವಾಗಿ ನೀರು ಹರಿದ ಪರಿಣಾಮ ರೈತರ ತೋಟಗಳಿಗೆ ಹರಿದು ನಷ್ಟ ಅನುಭವಿಸಿದ್ದಾರೆ ಎಂದರು.

ನರಸಾಪುರ ಕಂದಾಯ ವೃತ್ತದ ಕಂದಾಯ ನಿರೀಕ್ಷಕ ಲೋಕೇಶ್ ವಾತನಾಡಿ, ತೋಟಗಾರಿಕಾ ಮತ್ತು ಕೃಷಿ ಬೆಳೆಗಳಾದ ಕೊತ್ತಂಬರಿ, ನವಿಲುಕೋಸು, ಟೊಮ್ಯಾಟೊ, ರಾಗಿ, ಅವರೇ ಹಾಗೂ ಇತರೆ ಬೆಳೆಗಳ ಮೇಲೆ ನೀರು ಹರಿದಿದ್ದು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ನೀರು ಹರಿದಿರುವಂತಹ ಹಾಗೂ ನಷ್ಟ ಉಂಟಾದ ರೈತರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ ಮತ್ತು ತಮ್ಮ ಜಮೀನಿನ ಪಹಣಿ ಗ್ರಾಮ ಆಡಳಿತ ಅಧಿಕಾರಿಗೆ ನೀಡಿದರೆ ಅದನ್ನು ಸಂಬಂಧಪಟ್ಟ ಇಲಾಖೆಗೆ ವರದಿ ಕಳುಹಿಸಿ ಪರಿಹಾರ ಕೊಡಿಸುವಂತಹ ಪ್ರಯತ್ನ ವಾಡಲಾಗುತ್ತದೆ ಎಂದರು.

ರೈತರಾದ ಶಶಿಕುವಾರ್, ಮಂಜುನಾಥ್, ಶಿವಕುವಾರ್, ರಾಮಚಂದ್ರ, ಚಿಕ್ಕ ಅಣ್ಣಗಿರಿಯಪ್ಪ, ಪೈಲ್ವಾನ್ ವೆಂಕಟೇಶ್, ಮುನಿರಾಜು, ಪುರುಷೋತ್ತಮ್, ವೆಂಕಟೇಶ್, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net