ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಿ

14blh1-manavi
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಬೈಲಹೊಂಗಲ: ಕಳಪೆ ಕೀಟನಾಶಕದಿಂದ ಸೋಯಾಬೀನ್, ಹೆಸರು, ಹತ್ತಿ ಮತ್ತು ಉದ್ದು ಸೇರಿ ಹಾನಿಯಾದ ವಿವಿಧ ಬೆಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಬೈಲಹೊಂಗಲ, ಸವದತ್ತಿ, ಚನ್ನಮ್ಮನ ಕಿತ್ತೂರು, ಗೋಕಾಕ ಹಾಗೂ ರಾಮದುರ್ಗ ತಾಲೂಕಿನಾದ್ಯಂತ ಸೋಯಾಬೀನ್, ಹೆಸರು, ಹತ್ತಿ ಹಾಗೂ ಉದ್ದು ಬೆಳೆಗಳು ಕೀಟಬಾಧೆಯಿಂದ ಸಂಪೂರ್ಣವಾಗಿ ಹಾನಿಯಾಗಿವೆ. ನಾಲ್ಕೈದು ಬಾರಿ ಔಷಧ ಸಿಂಪಡಣೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.

ಪ್ರತಿ ಎಕರೆಗೆ ಔಷಧ ಸಿಂಪಡಣೆಗೆ 40-50 ಸಾವಿರ ರೂ. ಖರ್ಚು ಮಾಡಿದ್ದರೂ ಕೀಟಬಾಧೆ ಹತೋಟಿಗೆ ಬಂದಿಲ್ಲ. ರೈತರಿಗೆ ಕೂಡಲೇ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದರು. ಸಂಘಟನೆ ಉಕ ಅಧ್ಯಕ್ಷ ಶಿವಾನಂದ ಪಡಸಲಗಿ, ಜಿಲ್ಲಾಧ್ಯಕ್ಷ ಈರಪ್ಪ

ಹುಬ್ಬಳ್ಳಿ, ಉಪಾಧ್ಯಕ್ಷ ಸಿದ್ದರಾಯ ಕಳ್ಳಿಮನಿ, ಮುಖಂಡರಾದ ಕುಮಾರಸ್ವಾಮಿ ಹಿರೇಮಠ, ರಮೇಶ ಸಾಳುಂಕೆ, ರಾಯಪ್ಪ ಮಳಗಲಿ, ಮಹಾದೇವ ಕಲಭಾಂವಿ,

ಶ್ರೀಶೈಲ ಕೋಟಗಿ, ಗಂಗಪ್ಪ ನಾಶಿಪುಡಿ, ಸುರೇಶ ತೋಟಗಿ, ಅದೃಶ್ಯ ಬೆಳ್ಳಿಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net