ಸಮರ್ಪಕ ವಿದ್ಯುತ್ ಸರಬರಾಜು ಮಾಡಿ

LNG Manavi
ಲಿಂಗಸುಗೂರು ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳಗೆ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಸೇನೆ ತಾಲೂಕು ಅಧ್ಯಕ್ಷ ಶಿವರಾಜ ನಾಯಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಉಪಾಧ್ಯಕ್ಷ ಚಂದ್ರು ನಾಯಕ, ಬಸವರಾಜ ನಾಯಕ, ಚಂದ್ರಕಾಂತ ಭೋವಿ, ದೇವೇಂದ್ರ ನಾಯಕ, ಶಿವರಾಜ ಹಲಬನೂರು, ಕಿರಣ್ ನಾಯಕ, ಮಹಾಂತಯ್ಯ ಇತರರಿದ್ದರು.
Published on

ಲಿಂಗಸುಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಸೋಮವಾರ ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳಗೆ ಮನವಿ ಸಲ್ಲಿಸಿದರು.

ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಜನ ರೋಸಿ ಹೋಗಿದ್ದಾರೆ. ನೇತು ಬಿದ್ದ ಹಳೆಯ ತಂತಿಗಳು ಗಾಳಿ ಬಿಟ್ಟರೆ ವಿದ್ಯುತ್ ಕಡಿತಗೊಳ್ಳುತ್ತದೆ. ನಿತ್ಯ ಹತ್ತಿಪ್ಪತ್ತು ಬಾರಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ಫ್ರಿಜ್, ಫ್ಯಾನ್, ಮಿಕ್ಸರ್, ಏರ್ ಕೂಲರ್, ಟಿವಿ ಸೇರಿ ಇತರ ದಿನ ಬಳಕೆ ವಸ್ತುಗಳು ದುರಸ್ತಿಗೆ ಬರುತ್ತಿವೆ.

ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಶಿವರಾಜ ನಾಯಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಉಪಾಧ್ಯಕ್ಷ ಚಂದ್ರು ನಾಯಕ, ಬಸವರಾಜ ನಾಯಕ, ಚಂದ್ರಕಾಂತ ಭೋವಿ, ದೇವೇಂದ್ರ ನಾಯಕ, ಶಿವರಾಜ ಹಲಬನೂರು, ಕಿರಣ್ ನಾಯಕ, ಮಹಾಂತಯ್ಯ, ಲಕ್ಷ್ಮಣ ಭೋವಿ, ರುದ್ರಯ್ಯಸ್ವಾಮಿ, ರಮೇಶ ಭೋವಿ, ಸಂತೋಷ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net