

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಕೊಳಚೆ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ 281 ಕುಟುಂಬಗಳಿಗೆ ಕೂಡಲೇ ನಿವೇಶನ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ನಿವೇಶನ ರಹಿತರ ಪಟ್ಟಿ ಹಾಗೂ ರಾಜ್ಯಾದ್ಯಂತ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಸಂಪುಟ ಸಭೆಯ ನಿರ್ಣಯದಂತೆ ವಾರ್ಗಸೂಚಿ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ವಾಡಿ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ನಿವೇಶನ ರಹಿತರಿಗೆ ಭೂಮಿ ಗುರುತಿಸಲು ತಹಸೀಲ್ದಾರ್‌ಗಳಿಗೆ ಸೂಚಿಸಲಾಗಿದೆ, ಈ ಬಗ್ಗೆ ಕಂದಾಯ ಸಚಿವರೂ ನಿರ್ದೇಶನ ನೀಡಿದ್ದಾರೆ ಎಂದರು. ಕರೊನಾ ಸಂಕಷ್ಟದಲ್ಲಿ ಬಾಡಿಗೆ ಮನೆಗಳಲ್ಲಿರುವ ಕುಟುಂಬಗಳಿಗೆ ವಾಲೀಕರು ಕಿರುಕುಳ ನೀಡಬಾರದು, ಇಂತಹ ದೂರುಗಳಿದ್ದಲ್ಲಿ ಖುದ್ದು ಭೇಟಿ ವಾಡಿ ಎಂದು ಸಲಹೆಯಿತ್ತರು.
ಸಮಿತಿಯ ಶ್ವೇತಾ ಮಾತನಾಡಿ, ಹೊಂಬಯ್ಯನ ಪಾಳ್ಯದಲ್ಲಿ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ, ಕರೊನಾ ಸಂಕಷ್ಟಕ್ಕೆ ಸಿಲುಕಿ ದುಡಿಮೆಯಿಲ್ಲದೇ ವಾಂಗಲ್ಯ ವಾರಿ ಬಾಡಿಗೆ ಹಣ ಕಟ್ಟಿದ್ದೇನೆ ಸ್ವಾಮಿ, ದಯವಾಡಿ ಚಿಕ್ಕ ಸೈಟ್ ಕೊಡಿ, ಗುಡಿಸಲು ಹಾಕಿಕೊಂಡು ಬದುಕುತ್ತೇನೆ ಎಂದು ಮನವಿ ಮಾಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎ.ನರಸಿಂಹಮೂರ್ತಿ ಮಾತನಾಡಿ, ರಾಜ್ಯದಲ್ಲಿ ನಿವೇಶನ ನೀಡುವ ಪ್ರಕ್ರಿಯೆ ನಗರ ಪ್ರದೇಶಗಳಲ್ಲಿ ಸ್ಥಬ್ದಗೊಂಡಿದೆ, ದುರ್ಬಲ ವರ್ಗಗಳಿಗೆ ಮತ್ತು ನಗರ ಪ್ರದೇಶದಲ್ಲಿರುವ ನಿವೇಶನ ರಹಿತರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ಕಲಂ 18ಎ ರಡಿಯಲ್ಲಿ ಸರ್ಕಾರಿ ಭೂಮಿ ಗುರುತಿಸಿ ನಿವೇಶನ ಹಂಚಿಕೆ ವಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗಿದೆ ಎಂದರು.
ಕೊಳೆಗೇರಿ ಸಮಿತಿ ಕಾರ್ಯದರ್ಶಿ ಅರುಣ್ ಪದಾಧಿಕಾರಿಗಳಾದ ಶಂಕರಯ್ಯ, ಮೊಹಮ್ಮದ್ ಹಯತ್, ತಿರುಮಲಯ್ಯ, ರಂಗನಾಥ್, ಮೋಹನ್, ಶಾರದಮ್ಮ, ಗಂಗಮ್ಮ, ಪುಟ್ಟರಾಜು ಹಾಗೂ ನಮ್ಮ ಮನೆ ಹೋರಾಟ ಸಮಿತಿಯ ಮಂಗಳಮ್ಮ, ಚಂದ್ರಿಕಾ, ಹನುಮಕ್ಕ ಇದ್ದರು.