ನಿವೇಶನ-ವಸತಿ ಸೌಲಭ್ಯ ಕಲ್ಪಿಸಿ

2 SANDOOR 01
ಸಂಡೂರು ತಾಲೂಕು ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಅನಿಲ್ ಕುಮಾರ್, ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಗೌರವ ಅಧ್ಯಕ್ಷ ಹುಲುಗಪ್ಪ, ಪ್ರ.ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ನಾಗರಾಜ, ಸದಸ್ಯರಾದ ಕುಮಾರಸ್ವಾಮಿ, ಶ್ರೀನಿವಾಸ, ಪ್ರಕಾಶ, ನಾಗರಾಜ, ಗಣೇಶ ಇತರರಿದ್ದರು.
Published on

ಸಂಡೂರು: ತಾಲೂಕಿನ ಮಡಿವಾಳ ಸಮಾಜಕ್ಕೆ ಸರ್ಕಾರ ಧೋಬಿ ಘಾಟ್ ನಿರ್ಮಿಸಬೇಕು ಎಂದು ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಆಗ್ರಹಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸಮುದಾಯದ ಜನರಿಗೆ ನಿವೇಶನ, ವಸತಿ, ಇಸ್ತ್ರಿಪೆಟ್ಟಿಗೆ, ಗೂಡಂಗಡಿಗಳನ್ನು ಒದಗಿಸಬೇಕು ಎಂದರು. ತಹಸಿಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿಸಬೇಕು. ಸಮಾಜದ ಸಮಸ್ಯೆಗಳನ್ನು ಶಾಸಕರು ಹಾಗೂ ಸಂಸದರ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net