ಗಾದೆಗಳು ನೈಜತೆಯಿಂದ ಕೂಡಿವೆ

15 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಗಾದೆಗಳು ಅನುಭವದ ಮೂಸೆಯಿಂದ ಮೂಡಿ ಬಂದಿವೆ. ಅವುಗಳು ನೈಜತೆಯಿಂದ ಕೂಡಿವೆ. ಇಂತಹ ಕಾರ್ಯಕ್ರಮಗಳು ಮಹಿಳೆಯರ ಸೃಜನಾತ್ಮಕ ಕಲೆಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿ.ಬಿ. ಸಾವಿರಮಠ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ದಿ. ಆನಂದ ಚಿಗಟೇರಿ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ಗಾದೆ ಮಾತುಗಳ ಆಧರಿಸಿ ಕಥೆ ಹೇಳುವ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಧ್ಯಾಪಕಿ ಡಾ. ರತ್ನಾ ಐರಸಂಗ ಮಾತನಾಡಿ, ಗಾದೆಗಳನ್ನು ಆಧರಿಸಿ ಕತೆ ಹೆಣೆಯುವ ಕೆಲಸವು ಅರ್ಥಗಭಿರ್ತವಾಗಿದೆ. ಇಂತಹ ಕಾರ್ಯಕ್ರಮ ಸ್ತ್ರೀಯರಲ್ಲಿ ಸುಪ್ತವಾಗಿ ಅಡಗಿರುವ ಕಲೆಯನ್ನು ತೋರ್ಪಡಿಸುತ್ತದೆ ಎಂದರು.

ಡಾ. ಶೈಲಜಾ ಅಮರಶೆಟ್ಟಿ, ಡಾ. ವಿ. ಶಾರದಾ ಮಾತನಾಡಿದರು. ಸ್ಪರ್ಧೆಯಲ್ಲಿ 20 ಮಹಿಳೆಯರು ಭಾಗವಹಿಸಿದ್ದರು. ಜಯಶ್ರೀ ಗುತ್ತಲ ಪ್ರಥಮ, ಮಧುಮತಿ ಸಣಕಲ್​ ದ್ವೀತಿಯ ಹಾಗೂ ಮಂಜುಳಾ ಹೊಸೂರ ತೃತೀಯ ಸ್ಥಾನ ಪಡೆದರು.

ಮಂಗಳಾ ಚಿಗಟೇರಿ, ಡಾ. ಎಂ.ಆರ್​. ಈರಣ್ಣ, ಸುಜಾತಾ ಹಡಗಲಿ, ಕೊಪ್ಪದ, ಇತರರು ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ನಿರ್ಮಲಾ ಚಿಗಟೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net