

ಚಿತ್ರದುರ್ಗ: ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ವಿರುದ್ಧ ಕೇಳಿ ಬಂದಿರುವ ಕಮಿಷನ್ ಆರೋಪ ಸುಳ್ಳೆಂದು ಸಾಧಿಸುವ ಹೊಣೆ ಶಾಸಕರು ಹಾಗೂ ಸರ್ಕಾರದ ಮೇಲಿದೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ, ತಾಲೂಕಿನಲ್ಲಿ ಆಗುತ್ತಿರುವ ಕಾಮಗಾರಿಗಳು ಅವೈಜ್ಞಾನಿಕ, ಕಳಪೆ, ಕಮಿಷನ್ ದಂಧೆ ಹಾಗೂ ಅವ್ಯವಹಾರಗಳ ದೂರು, ಆರೋಪಗಳು ಕೇಳಿ ಬರುತ್ತಿದ್ದವು.
ಆದರೆ, ಈಗ ಗುತ್ತಿಗೆದಾರರೇ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಿಎಸ್‌ಟಿ, ಕಮಿಷನ್ ಕಳೆದ ಬಳಿಕ ಆಗಿರುವ 800-900 ಕೋಟಿ ರೂ. ವೆಚ್ಚದ ಕಾ ಮಗಾರಿಗಳ ಗುಣಮಟ್ಟ ಹೇಗಿದ್ದೀತು? ಆದ್ದರಿಂದ ಕಾಮಗಾರಿಗಳು ಕಳಪೆ ಆಗಿಲ್ಲ ಎಂಬುದನ್ನು ಸಾಬೀತುಪಡಿಸುವ ಹೊಣೆ ಚಿತ್ರದುರ್ಗದ ಹಿರಿಯ ಶಾಸಕರ ಮೇಲಿದೆ. ಶಾಸಕರ ವಿರುದ್ಧದ ಆರೋಪಗಳಿಂದಾಗಿ ಐತಿಹಾಸಿಕ ನಗರಿ ಚಿತ್ರದುರ್ಗಕ್ಕೆ ಅವಮಾನವಾಗಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ ಚಿತ್ರದುರ್ಗದಲ್ಲಿ ಹೆಚ್ಚಿನ ಭ್ರಷ್ಟಾಚಾ ರವಾಗಿದೆ.
ಇಲ್ಲಾಗಿರುವ ಕಾಮಗಾರಿಗಳ ತನಿಖೆಯನ್ನು ಲೋಕಾಯುಕ್ತ ಅಥವಾ ಸಿಐಡಿಗೆ ವಹಿಸಬೇಕು. ನಗರದಲ್ಲಿ ರಸ್ತೆ,ಡಿವೈಡರ್ ಹಾಗೂ ಚ ರಂಡಿಗಳ ನಿರ್ಮಾಣ ಅವೈಜ್ಞಾನಿಕವಾಗಿದೆ.
ಕ್ಷೇತ್ರದಲ್ಲಾಗುತ್ತಿದ್ದ ಕಿರುಕಳ ತಾಳದೆ ಹಲವು ಗುತ್ತಿಗೆದಾರರು ತಮ್ಮ ಕೆಲಸವನ್ನೇ ಕೈ ಬಿಟ್ಟು ಬ ದುಕಿಗೆ ಬೇರೆ ವೃತ್ತಿ ಅವಲಂಬಿಸಿದ್ದಾರೆ ಎಂದರು. ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾಮಗಾರಿಗಳ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಪಕ್ಷ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈಗ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಶಾಸಕರು ರಾಜೀನಾಮೆ ನೀಡಬೇಕೆಂದರು. ನಾಗರಾಜ್, ರವಿಕುಮಾರ್, ಲಿಂಗರಾಜು, ಮೈಲಾರಪ್ಪ ಇದ್ದರು.
-----