ಕನ್ನಡ ನಾಡಿನ ಹೆಮ್ಮೆಯ ಪುತ್ರ ‘ದಿನಕರ’

dinakar
Published on

ದಾಂಡೇಲಿ: ಶಿಕ್ಷಣ ಕ್ಷೇತ್ರ, ಚುಟುಕು ಸಾಹಿತ್ಯದಲ್ಲಿ ಅಪಾರ ಕೊಡುಗೆ ನೀಡಿ ಸಮಾಜದ ಒಳಿತಿಗಾಗಿ ವಿಚಾರಗಳನ್ನು ಧಾರೆ ಎರೆದ ದಿನಕರ ದೇಸಾಯಿ ಅವರು ಕನ್ನಡ ನಾಡಿನ ಹೆಮ್ಮೆಯ ಪುತ್ರ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಬಣ್ಣಿಸಿದರು.


ನಗರದ ಕನ್ನಡ ಸಾಹಿಯ್ಯ ಪರಿಷತ್ತಿನ ಜಿಲ್ಲಾ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ದಿನಕರ ದೇಸಾಯಿ ಅವರ 114 ನೇ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಆರ್.ಪಿ. ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಬೋಧಕ-ಬೋಧಕೇತರ ಹುದ್ದೆ ಸೃಷ್ಟಿಸಿ ಪವಿತ್ರ ಕಾರ್ಯ ಮಾಡಿದವರು ದಿನಕರ ದೇಸಾಯಿ ಎಂದರು.

ಮಂಜುನಾಥ ನಾಯ್ಕ, ಸುರೇಶ ಕಾಮತ, ಸೀತಾ ದಾನಗೇರಿ, ವೆಂಕಮ್ಮ ನಾಯ್ಕ, ದೀಪಾಲಿ ಸಾವಂತ ಇತರರು ಸ್ವ ರಚಿತ ಕವನ ವಾಚಿಸಿದರು. ತಾಲೂಕು ಕಸಾಪ ಕೋಶಾಧ್ಯಕ್ಷ ಶ್ರೀಮಂತ ಮದರಿ, ಪದಾಧಿಕಾರಿಗಳಾದ ಸರೇಶ ಪಾಲನಕರ, ಕಲ್ಪನಾ ಪಾಟೀಲ, ಅಕ್ಷಯ ಘಟಕಾಂಬಳೆ, ನಗರಸಭೆ ಸದಸ್ಯ ಮೋಹನ ಹಲವಾಯಿ, ಕರ್ನಾಟಕ ಸಂಘದ ಕಾರ್ಯದರ್ಶಿ ಕೀರ್ತಿ ಗಾಂವಕರ , ಸಹ ಕಾರ್ಯದರ್ಶಿ ಎಸ್.ಎಸ್, ಕುರ್ಡೇಕರ, ಅನೀಲ ದಂಡಗಲ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net