ಒನಕೆ ಓಬವ್ವ ಜಯಂತಿ ಸಮಾರಂಭ,ಜಿಲ್ಲೆಗೆ ಹೆಮ್ಮೆ

IMG_20221213_115012 (1)-11
Published on

ಚಿತ್ರದುರ್ಗ: ರಾಜ್ಯಮಟ್ಟದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ,ಚಿತ್ರದುರ್ಗದಲ್ಲಿ ಡಿ.18ರಂದು ನಡೆಯುತ್ತಿ ರುವುದು ಜಿಲ್ಲೆಗೆ ಹೆಮ್ಮೆ ತರುವಂಥ ಸಂಗತಿಯಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಜಯಂತಿ ಸಮಾರಂಭ ಏರ್ಪಡಿಸಿರುವ ನಗರದ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಮಂಗಳವಾರ ಭೇಟಿ ನೀಡಿ ಪೆಂಡಾಲ್ ನಿ ರ್ಮಾಣ ಮತ್ತಿತರ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿ,ರಾಜ್ಯಮಟ್ಟದ ಈ ಕಾರ‌್ಯಕ್ರಮವನ್ನು ದುರ್ಗದಲ್ಲಿ ಆಚರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಇದಕ್ಕಾಗಿ ಸಿಎಂಗೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಓಬವ್ವ ನಮ್ಮ ಮನೆ ಮಗಳೆಂಬ ಭಾವನೆ ಎಲ್ಲ ಸಮುದಾಯದವರಲ್ಲೂ ಇದೆ. ಎಲ್ಲ ಸಮಾಜದವರು ಜಾತ್ಯತೀತವಾಗಿ ಭಾಗವಹಿಸುವ ಮೂಲಕ ಈ ಸಮಾರಂಭವನ್ನು ಯಶಸ್ವಿಗೊಳಿಸ ಬೇಕು. ಸಮಾರಂಭದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಊಟ,ವಾಹನಗಳ ಪಾರ್ಕಿಂಗ್ ಇತ್ಯಾದಿ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ರೂಪಿಸಬೇಕೆಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಕ್ರೀಡಾಂಗಣದ ಸುತ್ತಮುತ್ತಲಿನ ಸ್ವಚ್ಚತೆ ಗೂ ಕ್ರಮ ವಹಿಸುವಂತೆ ತಾಕೀತು ಮಾಡಿರುವುದಾಗಿ ಹೇಳಿದರು.

ದುರ್ಗ ಎಂದರೆ ಓಬವ್ವ ನೆನಪಾಗುತ್ತದೆ. ಓಬವ್ವ ವಿರೋಧಿಗಳ ಸದೆಬಡಿವ ದೃಶ್ಯವನ್ನು ಚಲನಚಿತ್ರದಲ್ಲಿ ನೋಡಿದಾಗ ರೋಮಾಂಚ ನವಾಗುತ್ತದೆ ಎಂದರು. ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು,ಎಸ್ಪಿ ಕೆ.ಪರಶುರಾಮ್,ಎಡಿಸಿ ಇ.ಬಾಲಕೃಷ್ಣ,ಎಎಸ್‌ಪಿ ಕುಮಾರಸ್ವಾಮಿ, ಕ ನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ,ಬಡಾವಣೆ ಪಿಐ ನಹಿಂ ಅಹಮದ್,ನಗರಸಭೆ ಪರಿಸರ ಇಂಜಿ ನಿಯರ್ ಜಾಫರ್ ಮತ್ತಿತರ ಇಲಾಖೆ ಅಧಿಕಾರಿ,ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net