ವಿಜಯವಾಣಿ ಛಾಯಾಗ್ರಾಹಕ ಶಿವಲಿಂಗಯ್ಯಗೆ ಹೆಮ್ಮೆಯ ಧಾರವಾಡಿಗ ಪ್ರಶಸ್ತಿ

19 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಫೋಟೊ ಮತ್ತು ವಿಡಿಯೋಗ್ರಾಫರ್ಸ್​ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನವನ್ನು ಆ. 21ರಂದು ಇಲ್ಲಿನ ಆಲೂರು ವೆಂಕಟರಾವ್​ ಸಭಾಭವನದಲ್ಲಿ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ ಎಂದು ಸಂಜಿಘದ ಅಧ್ಯಕ್ಷ ರಾಹುಲ್​ ದತ್ತಪ್ರಸಾದ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಪೃಥ್ವಿರಾಜ್​ ಮಿಸ್ಕಿನ್​, ಮುರಳಿಧರ ಮಲಜಿ, ಶ್ರೀನಿವಾಸ ಮಲಜಿ ಆಗಮಿಸಲಿದ್ದಾರೆ ಎಂದರು.
ಸಂಸ್ಥೆ ವತಿಯಿಂದ ನೀಡುವ ಹೆಮ್ಮೆಯ ಧಾರವಾಡಿಗ-2024 ಪ್ರಶಸ್ತಿಗೆ ವಿಜಯವಾಣಿಯ ಛಾಯಾಗ್ರಾಹಕ ಶಿವಲಿಂಗಯ್ಯ ಪಾಟೀಲ, ಹಿರಿಯ ಛಾಯಾಗ್ರಾಹಕ ಮಿಲಿಂದ ಪಿಸೆ ಹಾಗೂ ಪತ್ರಕರ್ತ ಬಸವರಾಜ ಆನೆಗುಂದಿ ಭಾಜನರಾಗಿದ್ದಾರೆ. ಇದರ ಜತೆಗೆ ಅನುಭವಿ ಛಾಯಾಗ್ರಾಹಕರಿಗೆ ಸನ್ಮಾನಿಸಲಾಗುವುದು ಎಂದರು.
ರವಿ ಯಾಲಕ್ಕಿಶೆಟ್ಟರ್​, ಪೃಥ್ವಿರಾಜ್​ ಮಿಸ್ಕಿನ್​, ಮುರಳಿ ಮಲಜಿ, ಉಮೇಶ ಚಿಕ್ಕೋಡಿ, ಮಿಥುನ ಜಮದಾಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net