ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಾಳೆ

: ಹೊಸೂರು ಕುಮಾರ್.
: ಹೊಸೂರು ಕುಮಾರ್.
Published on

ಹುಣಸೂರು: ವಿದ್ಯುತ್ ದರ ಏರಿಕೆ, ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಲು ಸರ್ಕಾರ ವಿಧಿಸಿರುವ ಲಕ್ಷಾಂತರ ರೂ. ಶುಲ್ಕ, ಸ್ಮಾರ್ಟ್ ಮೀಟರ್ ಹೆಸರಿಲ್ಲಿ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಜಿಲ್ಲೆಯ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಏ.5ರಂದು ಪ್ರತಿಭಟನೆ ನಡೆಸಲಾಗುವುದೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರ ಕುಮಾರ್ ತಿಳಿಸಿದರು.

ಹೊಸದಾಗಿ ವಿದ್ಯುಚ್ಛಕ್ತಿ ಸಂಪರ್ಕ ಪಡೆಯಲು ಎರಡು ವರ್ಷಗಳಿಂದ ಆಗುತ್ತಿಲ್ಲ. ಸ್ಟಾರ್ಟ್ ಮೀಟರ್ ಅಳವಡಿಸುವ ನೆಪದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ಖಾಸಗಿಯವರ ಕೈಗೆ ಒಪ್ಪಿಸಲು ತಯಾರಿ ಮಾಡಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ವಿದ್ಯುತ್ ಮಂಡಳಿಯನ್ನು ಖಾಸಗಿಯವರ ಕೈಗೆ ಹೋಗುವ ಮುಂಚೆ ಸಾರ್ವಜನಿಕರು ಹಾಗೂ ರೈತರು ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಸರ್ಕಾರದ ವಿರುದ್ಧವಾಗಿ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸದಿದ್ದರೆ ಗಂಡಾಂತರ ತಪ್ಪಿದ್ದಲ್ಲ. ಆದ್ದರಿಂದ ಜಿಲ್ಲೆಯ ಎಲ್ಲ ತಾಲೂಕಿನ ಸೆಸ್ಕ್ ಕೇಂದ್ರದ ಮುಂಭಾಗ ಏ.5ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ರೈತರು, ಗ್ರಾಹಕರು ಭಾಗವಹಿಸಬೇಕು ಎಂದು ಹೇಳಿಕೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net