

ಮಡಿಕೇರಿ: ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿ ಒಕ್ಕೂಟ ವತಿಯಿಂದ ಎಲ್‌ಐಸಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಿ.ಎ.ಮಂಜುನಾಥ್, ರಾಷ್ಟ್ರೀಯ ನಾಯಕರ ಕರೆಯಂತೆ ನ೩೦ ರವರೆಗೆ ಪ್ರತಿ ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಯಲಿದೆ. ಸೆ ೩೦ರಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅ೩೧ ರಂದು ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ, ನ೧೫ ರಂದು ಮಡಿಕೇರಿ ನಗರದಲ್ಲಿ ಮೆರವಣಿಗೆ ನಡೆಸಲಾಗುವುದು. ನ೩೦ರಂದು ಜೋನಲ್ ಕಚೇರಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎಚ್.ಎಸ್.ಪ್ರೇಮಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರಥನ್ ಪೂಣಚ್ಚ, ನಿದೇರ್ಶಕರಾದ ಸತೀಶ್, ಎಂ.ಪಿ.ನಾಚಪ್ಪ ೫೦ ಕ್ಕೂ ಅಧಿಕ ಒಕ್ಕೂಟ ಪದಾಧಿಕಾರಿಗಳು ಪಾಲ್ಗೊಂಡಿದ್ದರು.