

ಶ್ರೀನಿವಾಸಪುರ: ಜಿಲ್ಲಾದ್ಯಂತ ವಿವಿಧ ಸಂಟನೆಗಳಿಂದ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಆಸ್ಪತ್ರೆ ಕಾರ್ಯ ನಿರ್ವಹಿಸಿದರೆ, ಅಂಗಡಿ&ಮುಂಗಟ್ಟುಗಳು ಮುಚ್ಚಿದ್ದವು. ಬೆಳಗ್ಗೆ ಬಸ್ಗಳ ಸಂಚಾರವಿಲ್ಲದೆ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದ ನಂತರ ಬಸ್ ಸಂಚಾರ ಪ್ರಾರಂಭವಾಯಿತು.
ಮತ್ತೊಂದಡೆ ತಾಲೂಕಿನಲ್ಲಿ ಶಾಲಾ&ಕಾಲೇಜುಗಳನ್ನು ಮುಚ್ಚುವಂತೆ ಯಾವುದೇ ಅಧಿಕೃತ ಆದೇಶ ನೀಡದೇ ಇದ್ದರೂ, ಪ್ರತಿಭಟನಾಕಾರರು ಸರ್ಕಾರಿ ಶಾಲಾ&ಕಾಲೇಜು ಬಲಂವಂತವಾಗಿ ಮುಚ್ಚಿಸಿದರು ಎನ್ನಲಾಗಿದ್ದು. ಬೆಳಗಿನ ವೇಳೆ ಬಸ್ಗಳ್ಳಿಲ್ಲದೇ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಗೈರಾಗಲು ಮತ್ತೊಂದು ಕಾರಣವಾಗಿದೆ.
ರಾಜ್ಯ ದಲಿತ ಸಂಘಟನೆ ಮುಖಂಡ ಎನ್.ಮುನಿಸ್ವಾಮಿ ಮಾತನಾಡಿ, ದೇಶದ ಪವಿತ್ರ ಸಂವಿಧಾನ ದುರ್ಬಲಗೊಳಿಸುವುದು ಖಂಡನೀಯ, ದೇಶದ ಎಲ್ಲ ಸಮುದಾಯಗಳಿಗೂ ಸಮಾನವಾದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ ಸಂವಿಧಾನವೇ ನಮ್ಮ ಜೀವನಾಡಿ. ಕೆಲವರು ಹುನ್ನಾರ ಹೂಡಿ ದೇಶದ ಜನರ ಮಧ್ಯೆ ಬಿರುಕು ಮೂಡಿಸಲು ಯತ್ನಿಸುತ್ತಿರುವುದು ಖಂಡನೀಯ. ದೇಶದಲ್ಲಿ ಪ್ರಜಾಪುಭುತ್ವ ವ್ಯವಸ್ಥೆ ಹದಗಡೆತ್ತಿದ್ದು, ಸಂವಿಧಾನ ಅರಿಯುವ ಅಗತ್ಯವಿದೆ ಎಂದರು.
ಪಿಎಲ್ಡಿ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ, ದೇಶದ ಪವಿತ್ರ ಗ್ರಂಥವಾದ ಸಂವಿಧಾನ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಸಂವಿಧಾನ ಉಳಿದರೆ ಮಾತ್ರ ದೇಶ ಬೆಳೆಯಲು ಸಾಧ್ಯ. ದೇಶದ ರಕ್ಷಣೆಗೆ ಎಲ್ಲರು ಕೈಜೋಡಿಸಬೇಕು ಎಂದು ಕೋರಿದರು.
ಕೆಪಿಆರ್ಎಸ್ ಜಿಲ್ಲಾ ಸಂಚಾಲಕ ಪಾತಕೋಟೆ ನವೀನ್ಕುಮಾರ್, ಪುರಸಭೆ ಅಧ್ಯಕ್ಷ ಬಿ.ಆರ್.ಬಾಸ್ಕರ್, ಕೆಪಿಆರ್ಎಸ್ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಪುರಸಭೆ ಸದಸ್ಯ ಸಂಜಯ್ ಸಿಂಗ್, ನಾಮಿನಿ, ಸದಸ್ಯರಾದ ನರಸಿಂಹಮೂರ್ತಿ, ಹೇಮಂತ್ಕುಮಾರ್, ರೈತ ಸಂಘದ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ, ವಿವಿಧ ಸಂಘಟನೆಗಳ ಮುಖಂಡರಾದ ಉಪರಪ್ಪಪಲ್ಲಿ ತಿಮ್ಮಯ್ಯ, ಚಲ್ದಿಗಾನಹಳ್ಳಿ ಸಿ.ವಿ.ಮುನಿಯಪ್ಪ , ವಿ.ಮುನಿಯಪ್ಪ, ವಾಸು, ಕೂಸ್ಸಂದ್ರ ರೆಡ್ಡಪ್ಪ, ಪ್ರಭಾಕರ ಗೌಡ, ನಾಗ್ದೇನಹಳ್ಳಿ ಶ್ರೀನಿವಾಸ್, ಅಬ್ದುಲ್ ಫಾರುಕ್, ಬೈರಾ ರೆಡ್ಡಿ, ಕೆ.ಎಲ್.ಕಾರ್ತಿಕ್, ಸಾಧಿಕ್ ಅಹ್ಮದ್, ವಿ.ಬದ್ರಿನರಸಿಂಹ, ಸದಾಶಿವ, ವೆಂಕಟ್, ಮುನಿಯಪ್ಪ ಇದ್ದರು.