ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

WhatsApp Image 2022-08-08 at 3.46.47 PM
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಳಿಕೋಟೆಯಿಂದ ತಲೆ ಮೇಲೆ ಕಲ್ಲುಹೊತ್ತು ಪಾದಯಾತ್ರೆ ಮೂಲಕ ಸೋಮವಾರ ವಿಜಯಪುರಕ್ಕೆ ಆಗಮಿಸಿದ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Published on

ವಿಜಯಪುರ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಳಿಕೋಟೆಯಿಂದ ತಲೆ ಮೇಲೆ ಕಲ್ಲುಹೊತ್ತು ಪಾದಯಾತ್ರೆ ಮೂಲಕ ಸೋಮವಾರ ವಿಜಯಪುರಕ್ಕೆ ಆಗಮಿಸಿದ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಮಾತನಾಡಿ, ತಾಳಿಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಹಡಗಿನಾಳ, ಮೂಕಿಹಾಳ, ಕಲ್ಲದೇವನಹಳ್ಳಿ, ಹರನಾಳ, ನಾಗೂರ ಮುಂತಾದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆಗೆ ಬಸ್‌ನಿಲ್ದಾಣದವರೆಗೆ ನೇರ ರಸ್ತೆ ಕಲ್ಪಿಸಬೇಕು. ಎರಡೂ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ತಾಳಿಕೋಟೆ ಪುರಸಭೆಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅವ್ಯವಹಾರದ ತನಿಖೆ ಮಾಡಬೇಕು. ಜಿ ಪ್ಲಸ್ 1 ಮಾದರಿ (ಆಶ್ರಯ) 600 ಮನೆಗಳ ಹಂಚಿಕೆಗೆ ಸಂಬಂಧಿಸಿದ ಮನೆಯಿಲ್ಲದ ಬಡವರು ಬಡ್ಡಿ ರೂಪದಲ್ಲಿ ಸಾಲಶೂಲ ಮಾಡಿ ಪುರಸಭೆಗೆ ಕೊಟ್ಯಂತರ ರೂಪಾಯಿ ಭರಣಾ ಮಾಡಿ ಐದು ವರ್ಷ ಗತಿಸುತ್ತಾ ಬಂದಿದ್ದು, ಮನೆ ಇಲ್ಲದೆ ಮತ್ತು ಹಣವನ್ನು ಕಳೆದುಕೊಂಡು ಮಾಡಿದ ಸಾಲದ ಬಡ್ಡಿ ಕಟ್ಟಲಾಗದೆ ಪರಿತಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಸಿ.ಎಸ್.ನಾಡಗೌಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಮುಖಂಡರಾದ ಸುರೇಶ ನಾಡಗೌಡ, ಚಿನ್ನು ನಾಡಗೌಡ, ನಿಂಗನಗೌಡ ಅಸ್ಕಿ, ಸಂಗಮೇಶ ಛಾಯಾಗೋಳ, ಮಹಿಬೂಬ ಚೋರಗಸ್ತಿ, ಪ್ರಭುಗೌಡ ಮದರಕಲ್, ಆರ್ಿ ಹೊನ್ನುಟಗಿ, ಜಗದೀಶ ಡೇರೆದ, ಕಾಸಿಮ್ ಪಟೇಲ್, ಸುರೇಶ ಹಜೇರಿ, ಅಕ್ಕಮಹಾದೇವಿ ಕಟ್ಟಿಮನಿ, ಸತ್ತಾರ ಅವಟಿ, ಮೋದಿನ್ ನಗಾರ್ಚಿ, ಮುನ್ನಾ ಅರ್ಜುಣಗಿ, ಆನಂದ ಗುರಡ್ಡಿ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net