ಬೆಲೆ ಏರಿಕೆ ಹಿಂಪಡೆಯದಿದ್ದರೆ ಪ್ರತಿಭಟನೆ-ಎಚ್ಚರಿಕೆ

NASHIMHA NAYAK
NASHIMHA NAYAK
Published on

ರಾಯಚೂರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸುತ್ತಿದ್ದು ಕೂಡಲೇ ಹಿಂಪಡೆಯದಿದ್ದರೆ ತಿಂಗಳ ಕೊನೆ ವಾರದಲ್ಲಿ ಜಿಲ್ಲಾಽಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ನರಸಿಂಹನಾಯಕ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಯಾವುದೇ ಮುನ್ಸೂಚನೆಗಳಿಲ್ಲದೇ ವಿದ್ಯುತ್, ಇಂಧನ, ಆರೋಗ್ಯ ಸೇವೆಗಳ ಬೆಲೆ ಏರಿಕೆ ಮಾಡಿದೆ.ಒಂದೇ ವರ್ಷದಲ್ಲಿ ಎರಡು ಬಾರಿ ವಿದ್ಯುತ್ ದರ ಏರಿಕೆ ಮಾಡಿದೆ.ಅಲ್ಲದೇ ವಿದ್ಯುತ್ ಉಪಕರಣಗಳ ಮೇಲೆ ಶುಲ್ಕವನ್ನು ಸಹ ಹೆಚ್ಚಿಸಿದೆ. ಡಿಸೇಲ್ ಬೆಲೆ ಏರಿಕೆಯಿಂದ ಕೃಷಿಮೇಲೆ ಗಂಭೀರ ಪರಿಣಾಮವಾಗಲಿದೆ. ಹತ್ತಿ ಮತ್ತು ಮೆಣಿಸಿನಕಾಯಿ ಬೆಳೇಯನ್ನು ಸರ್ಕಾರವೇ ಖರೀದಿ ಮಾಡಬೇಕು.

ರಾಜೋಳಿಬಂಡಾ ತಿರುವು ಯೋಜನೆ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನು ಭರ್ತಿ ಮಾಡಬೇಕು, ಕೃಷಿ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ಮಾರಾಟ ಮಾಡಬೇಕು, ನವಲಿ ಸಮನಾಂತರ ಜಲಾಶಯ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಧರ್ಮರೆಡ್ಡಿ, ಈರಣ್ಣ ಸಿದ್ದರಾಂಪುರು, ಮಲ್ಲನಗೌಡ, ನರಸಿಂಹರೆಡ್ಡಿ ಗಾಜರಾಳ, ಗೋವಿಂದ ನಾಯಕ, ಶಿವಪ್ಪ ,ಈರಣ್ಣ ಸರ್ಜಾಪುರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net