

ಸವಣೂರ: ಕುಲಾಂತರಿ ತಳಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ತಿರಸ್ಕರಿಸಬೇಕು. ಬೆಳೆ ವಿಮೆ ತಾರತಮ್ಯ ಸರಿಪಡಿಸುವುದು, ಬೆಳೆ ಹಾನಿ ಪರಿಹಾರ ತಕ್ಷಣ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ. 26ರಂದು ಬೆಳಗ್ಗೆ 11ಕ್ಕೆ ಹಾವೇರಿ ಕಾಗಿನೆಲೆ ವೃತ್ತದಿಂದ ಬೈಕ್ ರ‍್ಯಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯಪಾಲರು, ರಾಷ್ಟ್ರಪತಿ ಅವರು ರಾಜ್ಯದ ರೈತರು ಹಾಗೂ ಸಂಬಂಧಪಟ್ಟ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ರ್ಚಚಿಸಿ ಮಾಡಿರುವ ಕಾನೂನು ರಚನೆ ಆದೇಶವನ್ನು ಸ್ವಾಗತಿಸುತ್ತೇವೆ. ಆದರೆ, ನ್ಯಾಯಾಲಯ ನೀಡಿದ್ದ 4 ತಿಂಗಳ ಗಡುವು ಮುಕ್ತಾಯ ಹಂತ ತಲುಪಿಸುವ ಹಿನ್ನೆಲೆಯಲ್ಲಿ ಕುಲಾಂತರಿ ತಳಿಯನ್ನು ಸಂಪೂರ್ಣ ಬಹಿಷ್ಕರಿಸುವಂತಾಗಿದೆ ಎಂದರು. ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು, ಬೋರ್ವೇಲ್ ಹಾಕಿಸುವ ರೈತರಿಗೆ ಹೆಸ್ಕಾಂ ಕಂಪನಿ ಮೊದಲಿನ ರೀತಿ ಅರ್ಜಿ ಪಡೆಯಬೇಕು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತ್ವರಿತಗೊಳಿಸಬೇಕು. ಮೆಕ್ಕೆಜೋಳ, ಭತ್ತ ಬೆಳೆಗಳ ಖರೀದಿ ಕೇಂದ್ರ ತೆರೆಯಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು. ಮಾಲತೇಶ ಪೂಜಾರ ಮಾತನಾಡಿ, ಸವಣೂರ ಮೋತಿ ತಲಾಬ್ ಕೆರೆ ಸೇರಿ ವಿವಿಧ ದೊಡ್ಡ ಕೆರೆಗಳ ಅಭಿವೃದ್ಧಿ ಪಡಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸವಣೂರ ಕೆರೆ ದಂಡೆಯಲ್ಲಿ ನದಿ ನೀರು ಹರಿಸಲು ಒತ್ತಾಯಿಸಿ ಧರಣಿ ನೆಸಲಾಗುವುದು ಎಂದರು.
ಚನ್ನಪ್ಪ ಮರಡೂರ, ನೂರಅಹ್ಮದ ಮುಲ್ಲಾ, ಬಸನಗೌಡ ಅರಳಿಹಳ್ಳಿ, ರಾಜು ಕುಳೇನೂರ, ಅಬ್ದುಲ್ ಬುಡಂದಿ, ಸಿದ್ದಣ್ಣ ಕ್ಯಾಲಕೊಂಡ, ಫಕೀರಪ್ಪ ಜೋಗೇರ, ಪರಶುರಾಮ ಗದಿಗೆಣ್ಣವರ, ಶಿವಾಜಿ ಪವಾರ, ಮಂಜುನಾಥ ರ್ಬಾ, ಮಲ್ಲೇಶ ರ್ಬಾ, ಶೇಖರಗೌಡ ಪಾಟೀಲ ಇದ್ದರು.