ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಇಂದು

Protest Symbol
Published on

ರಾಮದುರ್ಗ: ರಾಜ್ಯ ಸರ್ಕಾರ ಒಳಮೀಸಲಾತಿ ನೀಡುವಾಗ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಅನ್ಯಾಯ ಮಾಡಿದ್ದು, ಸರ್ಕಾರ ಶ್ರೀ ಆದೇಶ ಮರುಪರಿಶೀಲಿಸಿ, ವೈಜ್ಞಾನಿಕ ಸಮೀೆ ನಡೆಸಬೇಕು ಎಂದು ಬಂಜಾರ ಸಮುದಾಯದ ಯುವ ಮುಖಂಡ ವಿಜಯಕುಮಾರ ರಾಠೋಡ ಒತ್ತಾಯಿಸಿದರು. ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯನ್ನು ಅಸ್ಪ-ೃಶ್ಯ ಎಂದು ವಿಂಗಡಣೆ ಮಾಡಿರುವುದು ಸರಿಯಲ್ಲ. ನಿವತ್ತ ನ್ಯಾಯಮೂರ್ತಿ ಎಚ್​.ಎನ್​.ನಾಗಮೋಹನದಾಸ್​ ಆಯೋಗದ ಸಮೀೆಯಲ್ಲಿ ಇನ್ನೂ ಕೆಲವು ಸಮುದಾಯಗಳು ಬಿಟ್ಟು ಹೋಗಿವೆ. ಹೀಗಾಗಿ ಎಲ್ಲ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ, ರಾಮದುರ್ಗದಲ್ಲಿ ಸೆ.2ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ತಾಪಂ ಆವರಣದಿಂದ ಬಹತ್​ ಪಾದಯಾತ್ರೆ ಹಮ್ಮಿಕೊಂಡು ತಹಸೀಲ್ದಾರ್​ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದರು. ನಾಗರಾಜ ಕಟ್ಟಿಮನಿ, ನಾಗಪ್ಪ ಭಜಂತ್ರಿ, ಕಷ್ಣಾ ಚವ್ಹಾಣ, ಶೇಖರ ಕೊರವರ, ಜೀವಲಪ್ಪ ಲಮಾಣಿ, ಹಣಮಂತ ಬಂಟನೂರ, ಎಂ.ಎಸ್​.ಚವ್ಹಾಣ, ಶ್ರೀಕಾಂತ ಭಜಂತ್ರಿ, ರಮೇಶ ನಾಯಕ, ಆನಂದ ಲಮಾಣಿ, ಬಸವರಾಜ ಕೊರವರ, ರವಿ ಭಜಂತ್ರಿ, ಉಮೇಶ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net