

ಇಂಡಿ: ಚಡಚಣ ತಾಲೂಕಿನ ಲೋಣಿ ಬಿ.ಕೆ. ಗ್ರಾಮದಲ್ಲಿ ಭೂಮಾಪಕ ಮಹಾಂತೇಶ ಸಜ್ಜನ ಮೇಲೆ ಹಲ್ಲೆ ನಡೆದ ಟನೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂದ ತಾಲೂಕು ಟಕದಿಂದ ಪಟ್ಟಣ ಮಿನಿ ವಿಧಾನ ಸೌಧ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಅಧ್ಯಕ್ಷ ಬಸವರಾಜ ರಾವೂರ ಮಾತನಾಡಿ, ಭೂಮಾಪಕ ಮಹಾಂತಪ್ಪ ಸಜ್ಜನ ಮೇಲಿನ ಹಲ್ಲೆಯಿಂದಾಗಿ ಭೂಮಾಪಕರು ಮಾನಸಿಕವಾಗಿ ನೊಂದಿದ್ದಾರೆ. ತಾಲೂಕಿನಲ್ಲಿ ಸರ್ಕಾರಿ ನೌಕರರ ಮೇಲೂ ಹಲ್ಲೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭೂಮಾಪಕರ ಸಂದ ತಾಲೂಕು ಅಧ್ಯಕ್ಷ ಉಮನೇಸ ಬಿರಾದಾರ, ರವಿ ಗಿಣ್ಣಿ, ಜಿಲ್ಲಾ ಭೂಮಾಪಕರ ಸಂದ ಅಧ್ಯಕ್ಷ ಎ.ಎಚ್. ಮುಲ್ಲಾ, ಗಂಗಾಧರ ಗುಜ್ಜರ, ವಿನಾಯಕ ಕುಲಕರ್ಣಿ ಮಾತನಾಡಿ, ಇಂಥ ದುಷತ್ಯ ಎಸಗಿದವರ ಮೇಲೆ ಕೂಡಲೇ ಕ್ರಮ ಕೈಗೊಂಡು ಅವರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಗ್ರೇಡ್&2 ತಹಸೀಲ್ದಾರ ಧನಪಾಲಶೆಟ್ಟಿ ದೇವೂರಗೆ ಮನವಿ ಸಲ್ಲಿಸಲಾಯಿತು.
ಎಸ್.ಆರ್. ಹಿರೇಮಠ, ಬಿ.ಎಸ್. ಮಜ್ಜಗೆ, ಆರ್.ಸಿ. ಲಚ್ಯಾಣ, ವಿರೇಶ ಜೋಕುಮಾರ, ಎಸ್.ವಿ. ಹರಳಯ್ಯ, ಸಿದ್ದಾರ್ಥ ನಾಯಕೊಡಿ, ಗುರುಶಾಂತ ಕುರಲೆ, ವಿಜಯಲಕ್ಷಿ$್ಮ ಕಲ್ಯಾಣಕರ, ದ್ರಾಾಯಿಣಿ ಕಾಚಾಪುರ, ಜ್ಯೋತಿ ಕುಂದರಗಿ, ಲಕ್ಷಿ$್ಮ ಶಿವೂರ ಇತರರಿದ್ದರು.