ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

IMG20250207205539.jpg
Published on

ಬೆಳಗಾವಿ: ಕಳೆದ ಹಲವು ವರ್ಷಗಳಿಂದ ಗ್ರಾಮದ ಸ್ಮಶಾನ ಭೂಮಿಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದೇವೆ, ನಮಗೆ ಈಗಿರುವ ಸ್ಮಶಾನ ಭೂಮಿ ಉಳಿಸಿಕೊಡಿ ಎಂದು ಒತ್ತಾಯಿಸಿ ತಾಲೂಕಿನ ದೇವಗಿರಿ ಗ್ರಾಮಸ್ಥರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕಡೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದೇವಗಿರಿ ಗ್ರಾಮದಲ್ಲಿರುವ ಸ್ಮಶಾನ ಭೂಮಿಯಲ್ಲಿ ಕಳೆದ ಹಲವು ವರ್ಷಗಳಿಂದ ಶವ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಸ್ಮಶಾನ ಜಾಗವು ಸುರೇಶ ಪಾಟೀಲ ಎಂಬುವರು ಮೂಲ ಮಾಲೀಕರು ಎಂದು ಸ್ಮಶಾನ ಬಳಕೆಗೆ ಅಡ್ಡಿ ಪಡೆಸುತ್ತಿದ್ದಾರೆ. ಹಾಗೂ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ. ಪರಿಣಾಮ ಗ್ರಾಮದ ಬಹುತೇಕ ಜನರಿಗೆ ಪರ್ಯಾಯ ಸ್ಮಶಾನ ಭೂಮಿ ಇಲ್ಲ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಈಗಿರುವ ಸ್ಮಶಾನ ಭೂಮಿ ಮುಂದುವರಿಸುವಂತೆ ಮನವಿ ಮಾಡಿದರು.

ಗೌಡಪ್ಪ ಪಾಟೀಲ, ರಾಮಪ್ಪ ಚುರಮುರಿ, ಬಾಬು ಪಾಟೀಲ, ಸುರೇಶ ಅಂಬೇವಾಡಿ, ಬಾಬು ಚೌಗಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net