ಮೂಲ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನೆ

Untitled-2
ಮೂಲ ಸೌಲಭ್ಯ ಕಲ್ಪಿಸುವಂತೆ ನಗರಸಭೆ ವಿರುದ್ಧ ನಿವಾಸಿಗಳು ಪ್ರತಿಭಟನೆ ನಡೆಸಿದರು. ಕುಮಾರಸ್ವಾಮಿ, ಮುನಿರಾಜು, ಪವಿತ್ರಾ, ಲಕ್ಷ$್ಮಮ್ಮ, ಲಲಿಲಮ್ಮ, ಭಾಗ್ಯಮ್ಮ, ಮೀನಾಕ್ಷಮ್ಮ, ಗಂಗಮ್ಮ ಇದ್ದರು.
Published on

ನೆಲಮಂಗಲ: ಕುಡಿಯುವ ನೀರು, ಚರಂಡಿ ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ರಾವೇಂದ್ರ ಬಡಾವಣೆ ನಿವಾಸಿಗಳು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದರು. ನಗರಸಭೆ ವ್ಯಾಪ್ತಿಯ ಕುಣಿಗಲ್​ ವೃತ್ತ ಬಳಿಯ ನಗರದ ರಾವೇಂದ್ರ ಬಡಾವಣೆಯಲ್ಲಿ ಸಮಾವೇಶಗೊಂಡ ಬಡಾವಣೆ ನಿವಾಸಿಗಳು ಕುಡಿಯುವ ನೀರು, ಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದರು. ಮುಖಂಡ ಬೆಟ್ಟಯ್ಯ ಮಾತನಾಡಿ, 2023ರಿಂದ ನಗರಸಭೆಗೆ ಕುಡಿಯುವ ನೀರು ಕಲ್ಪಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಾಜಕೀಯ ದುರುದ್ದೇಶದಿಂದ ಬಡಾವಣೆ ಕೆಲ ಮನೆಗಳಿಗೆ ನೀರು ನೀಡುತ್ತಿಲ್ಲ. ಜತೆಗೆ ನಗರಸಭೆ ಅನುದಾನದಲ್ಲಿ ಆಯ್ದ ವ್ಯಕ್ತಿಗಳ ಮನೆ ಬಳಿ ಚರಂಡಿ ನಿರ್ಮಾಣ ಮಾಡಿದ್ದು, ಅಭಿವೃದ್ಧಿ ವಿಚಾರವಾಗಿ ನಗರಸಭೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಜತೆಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಹಣ ನೀಡಿ ಟ್ಯಾಂಕರ್​ ಮೂಲಕ ನೀರು ಪೂರೈಕೆ ಮಾಡಿಕೊಂಡು ಲಾಂತರ ಹಣದ ಖರ್ಚು ಮಾಡಲಾಗಿದೆ. ಜತೆಗೆ ನೀರಿನ ತೆರಿಗೆ ಕಟ್ಟಿದರೂ ನೀರು ನೀಡುತ್ತಿಲ್ಲ ಆರೋಪಿಸಿದರು. ಬಡಾವಣೆ ನಿವಾಸಿ ಪವಿತ್ರಾ ಮಾತನಾಡಿ, ಕುಡಿಯುವ ನೀರು ಇಲ್ಲದೆ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರು ಕಲ್ಪಿಸುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net