ಸ್ಥಿರಾಸ್ತಿ ನೋಂದಣಿ ಶುಲ್ಕ ಹೆಚ್ಚಳಕ್ಕೆ ಖಂಡನೆ

dj clk manavi
Published on

ಚಳ್ಳಕೆರೆ: ತಾಲೂಕಿನ ಸ್ಥಿರಾಸ್ತಿಗಳ ನೋಂದಣಿ ಶುಲ್ಕದಲ್ಲಿ ಶೇ.100ರಿಂದ 300ರಷ್ಟು ಹೆಚ್ಚುವರಿ ಮಾಡುವುದನ್ನು ಖಂಡಿಸಿ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರೇಹಾನ್‌ಪಾಷಾ ಅವರಿಗೆ ಮನವಿ ಸಲ್ಲಿಸಿದರು.

ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆಯನ್ನು ಹೆಚ್ಚುವರಿ ಮಾಡಿರುವ ಬಗ್ಗೆ ನಿರ್ದಿಷ್ಟವಾಗಿ ಎಷ್ಟು ಎಂದು ಬಹಿರಂಗಪಡಿಸಿಲ್ಲ.

ತಾಲೂಕಿನ ಕಸಬಾ ಹೋಬಳಿ, ಪರಶುರಾಂಪುರ, ತಳಕು ನಾಯಕನಹಟ್ಟಿ ಮತ್ತು ಟೌನ್ ವ್ಯಾಪ್ತಿಯಲ್ಲಿ ಮಾರುಕಟ್ಟೆ ಧಾರಣೆಯನ್ನು ಶೇ.20ರಿಂದ 30ರಷ್ಟು ಪರಿಷ್ಕರಿಸುವ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗಿತ್ತು.

ಇದರ ಬಗ್ಗೆ ಯಾವುದೇ ಬಹಿರಂಗವಾಗಿ ಪತ್ರಿಕೆ ಪ್ರಕಟಣೆ ಮತ್ತು ಸೂಚನಾ ಫಲಕದಲ್ಲಿ ಸ್ಪಷ್ಟಪಡಿಸಿಲ್ಲ.

ಏಕಾಏಕಿ ಕಚೇರಿಯಲ್ಲಿ ಮಾತ್ರ ಶೇ.100ರಿಂದ 300ರಷ್ಟು ಹೆಚ್ಚುವರಿ ಮಾಡುತ್ತಿರುವುದು ಸಾರ್ವಜನಿಕರಿಗೆ ಮತ್ತು ಆಸ್ತಿದಾರರಿಗೆ ತೀವ್ರ ತೊಂದರೆಯಾಗಿದೆ. ತಾಲೂಕು ಬರಪೀಡಿತ ಪ್ರದೇಶವಾಗಿದೆ.

ಇಲ್ಲಿನ ಬಡಜನರು ಕೂಲಿ ಕಾರ್ಮಿಕರು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಆಸ್ತಿ ಮೌಲ್ಯವನ್ನು ಹೆಚ್ಚಳ ಮಾಡಬಾರದು. ಈ ಕೂಡಲೇ ಸರ್ಕಾರ ಹೆಚ್ಚುವರಿ ಶುಲ್ಕ ಪಡೆಯುವುದನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ನಗರಸಭಾ ಸದಸ್ಯರಾದ ಕೆ.ವೀರಭದ್ರಯ್ಯ, ಟಿ.ಮಲ್ಲಿಕಾರ್ಜುನ, ಎಸ್.ಮುಜೀಬುಲ್ಲಾ, ರೇವಣ್ಣ, ಖಲೀಮ್, ರಾಜಶೇಖರ್, ಜಗದೀಶ್, ಸಿ.ರವಿಕುಮಾರ್, ಶೇಖರಪ್ಪ, ಎಚ್.ಎಂ.ಮಹಾಂತೇಶ್, ಮಂಜುನಾಥ, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net