ಪ್ರತಿಭಟನಾ ರ‍್ಯಾಲಿ ೩೦ರಂದು

16 vikram 3 (Shankar halagatti)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಎದುರಿಸುತ್ತಿರುವ ಸಂಸದ ಪ್ರಜ್ವಲ್​ ರೇವಣ್ಣ ಬಂಧನ ಹಾಗೂ ಸಂತ್ರಸ್ತ ಮಹಿಳೆಯರ ನತೆ ಎತ್ತಿ ಹಿಡಿಯುವಂತೆ ಆಗ್ರಹಿಸಿ ಮೇ 30ರಂದು ಹೋರಾಟದ ನಡಿಗೆ ಹಾಸನದ ಕಡೆಗೆ ಪ್ರತಿಭಟನಾ ರ‍್ಯಾಲಿ ಹಾಗೂ ಬಹಿರಂಗ ಸಮಾವೇಶವನ್ನು ಹಾಸನದಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ವಿದ್ಯಾವರ್ಧಕ ಸಂದ ಕಾರ್ಯದಶಿರ್ ಶಂಕರ ಹಲಗತ್ತಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರ ಚಳವಳಿಗಳ ಒಕ್ಕೂಟದ ವತಿಯಿಂದ ರ್ಯಾಲಿ ಏರ್ಪಡಿಸಲಾಗಿದೆ. ರಾಜ್ಯದ ಎಲ್ಲ ಮಹಿಳಾ, ದಲಿತ, ರೈತ, ಕಾಮಿರ್ಕ ಸಂಟನೆಗಳು ಸೇರಿ ವಿದ್ಯಾಥಿರ್ಗಳು ಹಾಗೂ ಧಾರವಾಡ ಜಿಲ್ಲೆಯಿಂದ ನೂರಾರು ಜನರು ಪಾಲ್ಗೊಳ್ಳುವರು ಎಂದರು.
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಮೇ 28ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂದಿಂದ ಮೌನ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ವಿವೇಕಾನಂದ ವೃತ್ತ, ಗಾಂಧಿ- ವೃತ್ತ, ಹಳೇ ಬಸ್​ ನಿಲ್ದಾಣ, ಸುಭಾಷ ರಸ್ತೆ ಮೂಲಕ ವಿದ್ಯಾವರ್ಧಕ ಸಂದಲ್ಲಿ ಮೆರವಣಿಗೆ ಮಕ್ತಾಯವಾಗಲಿದೆ ಎಂದರು.
ಸಿಐಟಿಯು ರಾಜ್ಯ ಕಾರ್ಯದಶಿರ್ ಮಹೇಶ ಪತ್ತಾರ ಮಾತನಾಡಿ, ಪ್ರಜ್ವಲ್​ ರೇವಣ್ಣ ಲೈಂಗಿಕ ಕೃತ್ಯದಲ್ಲಿ ಭಾಗಿಯಾದ ಆರೋಪ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಪ್ರಜ್ವಲ್​ಗೆ ಟಿಕೆಟ್​ ನೀಡಿದ್ದಾರೆ. ಇದರಲ್ಲಿ ಪ್ರಕರಣದ ದಾರಿ ತಪ್ಪಿಸುವ ಹುನ್ನಾರ ನಡೆದಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹಾಸನಕ್ಕೆ ಭೇಟಿ ನೀಡಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನ ಹೇಳಿ ಅವರಿಗೆ ಮನೋಬಲ ತುಂಬಬೇಕು. ಎಸ್​ಐಟಿ ಅಧಿಕಾರಿಗಳಿಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಅನುಕೂಲ ಮಾಡಬೇಕು. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ಶಿವಾನಂದ ಶೆಟ್ಟರ್​, ಪ್ರಭಾವತಿ ದೇಸಾಯಿ, ಮುಸ್ತಾಕ್​ ಹಾವೇರಿಪೇಟ್​, ಮಧುಲತಾ ಗೌಡರ, ಭುವನಾ ಬಳ್ಳಾರಿ, ಬಿ.ಎಚ್​. ಪೂಜಾರ, ಸತೀಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net