ನ್ಯಾಯ ಆ.14ರಂದು ನಗರ ಠಾಣೆಯ ಮುಂಭಾಗ ಪ್ರತಿಭಟನೆ

Published on

ಪುತ್ತೂರು: ಸುಳ್ಯ ಶಾಂತಿನಗರ ನಿವಾಸಿ ಶ್ರೀಜಿತ್ ಹೊಟ್ಟೆನೋವಿನ ಕಾರಣಕ್ಕೆ ಪುತ್ತೂರಿನ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿದ ಸಮಯ ವೆಂಟಿಲೇಟರ್ ಇಲ್ಲದೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುವ ಸಮಯ ಮೃತಪಟ್ಟಿದ್ದು, ವೈದ್ಯರ ಮೇಲೆ ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುರ್ತು ವ್ಯವಸ್ಥೆ ಇಲ್ಲದೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರನ್ನು ಬಂಧಿಸಬೇಕು ಮತ್ತು ಸರ್ಕಾರ ನೊಂದ ಕುಟುಂಬಕ್ಕೆ ೨೫ ಲಕ್ಷ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆ.೨೪ರಂದು ನಗರ ಠಾಣೆಯ ಮುಂಭಾಗ ಪ್ರತಿಭಟಿಸಿ ನ್ಯಾಯ ಕೇಳಲಿದ್ದೇವೆ ಎಂದು ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.

ಮುಖಂಡರಾದ ಧನಂಜಯ ನಾಯ್ಕ್ ಬಲ್ನಾಡು, ಚಂದ್ರಶೇಖರ್ ಸುಳ್ಯ, ಸುಂದರ್ ಪಾಟಾಜೆ, ಸುಮತಿ ಬೆಟ್ಟಂಪಾಡಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net