ಭೂಸ್ವಾಧಿನ ವಿರೋಧಿಸಿ 28ಕ್ಕೆ ಪ್ರತಿಭಟನೆ

18 10 2025_BGR_RURAL-PAGE_5A
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಉಗ್ರಪ್ಪ ಮಾತನಾಡಿದರು. ಕಾರ್ಯಾಧ್ಯಕ್ಷ ಸಿ.ಎಚ್​ ರಾಮಕೃಷ್ಣಯ್ಯ, ಗೌರವಾಧ್ಯಕ್ಷ ರಾಮಕೃಷ್ಣಯ್ಯ, ಮುಖಂಡರಾದ ಸಂಜೀವನಾಯಕ್​, ಚಂದ್ರತೇಜಸ್ವಿ, ರೇಣುಕಾರಾಧ್ಯ, ಪ್ರಭಾಬೆಳವಂಗಲ, ರೈತ ಸಂದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್​ ಇದ್ದರು.
Published on

ದೊಡ್ಡಬಳ್ಳಾಪುರ: ಕರ್ನಾಟಕ ಗೃಹ ಮಂಡಳಿಯು ದೊಡ್ಡಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ, ಐಯ್ಯನಹಳ್ಳಿ, ಕಸಾಟ್ಟ ಗ್ರಾಮಗಳ 2,760 ಎಕರೆ ಭೂಮಿಯ ಸ್ವಾಧಿನಕ್ಕೆ ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಉಗ್ರಪ್ಪ, ಸರ್ಕಾರ ಕರ್ನಾಟಕ ಗೃಹ ಮಂಡಳಿ ಯೋಜನೆಗಾಗಿ ಭೂಸ್ವಾಧಿನ ಪ್ರಕ್ರಿಯೆ ಮಾಡುತ್ತಿದೆ. ನಮ್ಮ ಭಾಗದಲ್ಲಿ ಇರುವುದೇ ಫಲವತ್ತಾದ ಭೂಮಿ. ಇದನ್ನೆ ನಂಬಿ ರೈತರು ಜೀವನ ನಡೆಸುತ್ತಿದ್ದಾರೆ. ಶೇ.90 ಮಂದಿ ಹೈನುಗಾರಿಕೆ ಅವಲಂಬಿಸಿದ್ದಾರೆ. ಈಗಾಗಲೇ 5,700 ಎಕರೆಯನ್ನು ಕ್ವಿನ್​ ಸಿಟಿಗಾಗಿ ವಶಪಡಿಸಿಕೊಂಡಿದೆ. ಈಗ 50:50 ಅನುಪಾತದಲ್ಲಿ ಕೆಎಚ್​.ಬಿ ಭೂಸ್ವಾಧಿನ ಮಾಡಿಕೊಳ್ಳುತ್ತಿದೆ. ಇದಕ್ಕೆ ಐದು ಹಳ್ಳಿಗಳ ಜನ ತೀವ್ರ ವಿರೋಧ ಇದೆ. ಇದನ್ನು ಖಂಡಿಸಿ ಅ.28 ರಂದು ಬೃಹತ್​ ಹೋರಾಟ ನಡೆಸಲಾಗುವುದು ಎಂದರು. ಪ್ರತಿಭಟನೆಗೆ ರೈತಪರ, ಕನ್ನಡಪರ, ದಲಿತಪರ ಸೇರಿದಂತೆ ವಿವಿಧ ಪ್ರಗತಿಪರ ಸಂಟನೆಗಳು

ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.

ಭೂಸ್ವಾಧಿನ ವಿರೋಧಿಸಿ ಹೋರಾಟ : ಪ್ರಾಂತರೈತ ಸಂದ ರಾಜ್ಯ ಸಹ ಕಾರ್ಯದರ್ಶಿ ಪ್ರಭಾ ಬೆಳವಂಗಲ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಸರ್ಕಾರ ಭೂಮಿಯನ್ನು ಕಸಿದುಕೊಳ್ಳುತ್ತಿದೆ. ಸರ್ಕಾರ ಹೆದ್ದಾರಿ, ಕೆಐಎಡಿಬಿ, ಫೆರಿಫೆರಲ್​ ರಸ್ತೆ, ಏರೋಸ್ಪೇಸ್​, ಕ್ವಿನ್​ ಸಿಟಿ ಹೀಗೆ ಹಲವು ಹೆಸರುಗಳಲ್ಲಿ ಸರ್ಕಾರ ಭೂಸ್ವಾಧಿನ ಮಾಡಿಕೊಂಡು ರೈತರನ್ನ ಒಕ್ಕಲೆಬ್ಬಿಸುತ್ತಿದ್ದಾರೆ. ಭೂಮಿ ಕಿತ್ತುಕೊಂಡರೆ ರೈತರ ಜೀವನ ಬೀದಿಗೆ ಬರಲಿದೆ. ರೈತರು ಸಲ್ಲಿಸಿದ್ದ ನಮೂನೆ 57 ಅರ್ಜಿ ವಜಾ ಮಾಡಿದ್ದಾರೆ. ಅ.28ರಂದು ತಾಲೂಕು ಮತ್ತು ಜಿಲ್ಲಾದ್ಯಂತ ಸರ್ಕಾರ ಮಾಡುತ್ತಿರುವ ಭೂಸ್ವಾಧಿನ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net