ಎಲೆಚಾಗಳ್ಳಿ ಗ್ರಾಮಸ್ಥರ ಪ್ರತಿಭಟನೆ

FEBRA., 19, HNP., Ph.3. (1)
Published on

ಹೊಳೆನರಸೀಪುರ: ತಾಲೂಕಿನ ಎಲೆಚಾಗಳ್ಳಿ ಗ್ರಾಮದ ಅಂಚೆ ಕಚೇರಿ ಬಾಗಿಲನ್ನು ನಿಗದಿತ ಸಮಯಕ್ಕೆ ತೆರೆಯುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಹಿರಿಯ ಮಲ್ಲೇಶಪ್ಪ ಮಾತನಾಡಿ, ಬುಧವಾರ ಬೆಳಗ್ಗೆ 10.30 ಆದರೂ ಅಂಚೆ ಕಚೇರಿಯ ಬಾಗಿಲನ್ನು ತೆರೆದಿಲ್ಲ. ದಿನವೂ ಇದೇ ಪರಿಸ್ಥಿತಿ ಇದೆ. ಮನ ಬಂದಂತೆ ಕಚೇರಿ ಬಾಗಿಲು ತೆರೆಯುತ್ತಾರೆ, ಮುಚ್ಚುತ್ತಾರೆ ಎಂದು ದೂರಿದರು.

ವೃದ್ಧಾಪ್ಯ ವೇತನ ಪಡೆಯಲು ಸುತ್ತಲಿನ ಗ್ರಾಮಗಳಿಂದ ಫಲಾನುಭವಿಗಳು ಬಂದು ಕಾಯುವ ಪರಿಸ್ಥಿತಿ ಇದೆ. ಹಾಗಾಗಿ ಅಂಚೆ ಕಚೇರಿಯ ಬಾಗಿಲನ್ನು ಸರಿಯಾದ ಸಮಯಕ್ಕೆ ತೆರೆಯುವಂತೆ ಒತ್ತಾಯಿಸಿದರು.

11 ಗಂಟೆಯಾದರೂ ಕಚೇರಿ ತೆರೆಯದಿದ್ದರಿಂದ ಹೊಳೆನರಸೀಪುರ ಅಂಚೆ ಕಚೇರಿ ಅಧಿಕಾರಿ ಮಂಜುನಾಥ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ ನಿಯಮದಂತೆ ನಿಗದಿತ ಸಮಯಕ್ಕೆ ಕಚೇರಿ ತೆರೆದು ಕಾರ್ಯ ನಿರ್ವಹಿಸಬೇಕು. ಇಷ್ಟ ಬಂದಾಗ ತೆರೆಯಲು ಅವಕಾಶವಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ಪ್ರತಿಭಟನೆ ವಾಪಸ್ ಪಡೆಯಲಾಯಿತು ಎಂದು ಮಲ್ಲೇಶಪ್ಪ ತಿಳಿಸಿದರು. ಗ್ರಾಮಸ್ಥರಾದ ಕಲ್ಲಯ್ಯ, ಕಿಕ್ಕೇರಮ್ಮ, ಚೆನ್ನಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net