

ಧಾರವಾಡ: ಸರ್ಕಾರದ ಆದೇಶದಂತೆ ಪ್ರತಿ ಟನ್ ಕಬ್ಬಿಗೆ ೧೫೦ ರೂ. ಹೆಚ್ಚುವರಿ ಹಣ ಪಾವತಿ, ಕಬ್ಬಿಗೆ ಎಫ್‌ಆರ್‌ಪಿ ಪುನರ್ ಪರಿಶೀಲನೆ ಮತ್ತು ಕಾರ್ಖಾನೆ ದರ ಘೋಷಣೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ಕಬ್ಬು ಬೆಳೆಗಾರರ ಸಂಘದಿAದ ನಗರದ ಜಿಲ್ಲಾಽಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ೨೦೨೨- ೨೩ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ೧೫೦ ರೂ. ಘೋಷಣೆ ಮಾಡಿತ್ತು. ಕಾರ್ಖಾನೆಗಳು ಈವರೆಗೂ ರೈತರಿಗೆ ಹೆಚ್ಚುವರಿ ಹಣ ಪಾವತಿಸಿಲ್ಲ. ಪ್ರಸಕ್ತ ವರ್ಷ ಕಟಾವು ಮತ್ತು ಸಾಗಾಣಿಕೆ ಹೊರತುಪಡಿಸಿ ರೈತರಿಗೆ ನೇರವಾಗಿ ಪ್ರತಿ ಟನ್ ಕಬ್ಬಿಗೆ ೩,೫೦೦ ರೂ. ಘೋಷಿಸಿ ರೈತರ ಹಿತಾಸಕ್ತಿ ಕಾಪಾಡಬೇಕು. ಈ ವರ್ಷ ಮಳೆಯ ಅಭಾವದಿಂದ ಶೇ. ೬೦ರಷ್ಟು ಇಳುವರಿ ಕಡಿಮೆಯಾಗಿದೆ. ಕೂಡಲೇ ರೈತರು ಹಾಗೂ ಕಾರ್ಖಾನೆಯವರ ಸಭೆ ಜರುಗಿಸಬೇಕು. ದ್ವಿಪಕ್ಷೀಯ ಒಪ್ಪಂದ ಆದ ನಂತರ ಕಬ್ಬು ಕಟಾವು ಆರಂಭಕ್ಕೆ ಅನುಮತಿ ಕೊಡಬೇಕು ಎಂದು ಜಿಲ್ಲಾಽಕಾರಿ ಗುರುದತ್ತ ಹೆಗಡೆ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.
ನಿಜಗುಣಿ ಕೆಲಗೇರಿ, ಮಹೇಶ ಬೆಳಗಾವಕರ, ಉಳವಪ್ಪ ಬಳಿಗೇರ, ಬಸವನಗೌಡ ಸಿದ್ದನಗೌಡರ, ವಸಂತ, ಸಾದೇವಪ್ಪ, ಚನ್ನಪ್ಪ ಜಗದಪ್ಪನವರ, ನಿಂಗಪ್ಪ ತಡಸ, ಇತರರಿದ್ದರು.