ನಿವೃತ್ತ ಯೋಧರ ಪ್ರತಿಭಟನೆ

06sunti01
ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ನಿವೃತ್ತ ಯೋಧರು ಪ್ರತಿಭಟನೆ ನಡೆಸಿದರು.
Published on

ಸುಂಟಿಕೊಪ್ಪ: ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸುಂಟಿಕೊಪ್ಪ ಕನ್ನಡವೃತ್ತದಲ್ಲಿ ಸುಂಟಿಕೊಪ್ಪ ಹೋಬಳಿ ಜೈ ಜವಾನ್ ಮಾಜಿ ಸೈನಿಕರ ಟ್ರಸ್ಟ್‌ನ ನಿವೃತ್ತ ಯೋಧರು ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಮಾಜಿ ಸೈನಿಕರ ಸಂಘ ಶುಕ್ರವಾರ ಕರೆ ನೀಡಿದ ಮಡಿಕೇರಿ ಚಲೋ ಕಾರ್ಯಕ್ರಮಕ್ಕೆ ಸುಂಟಿಕೊಪ್ಪ ಹೋಬಳಿ ಜೈ ಜವಾನ್ ಮಾಜಿ ಸೈನಿಕರ ಟ್ರಸ್ಟ್‌ನ ನಿವೃತ್ತ ಯೋಧರು ಮಡಿಕೇರಿಗೆ ಜಿಲ್ಲಾ ಕೇಂದ್ರಕ್ಕೆ ತೆರಳುವ ಸಂದರ್ಭ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ಮಹಾ ಸೇನಾನಿಗಳನ್ನು ಅವಹೇಳನ ಮಾಡಿ ಅಂತರ್ಜಾಲದಲ್ಲಿ ಹರಿಯಬಿಟ್ಟು ಅವಮಾನಿಸಿದ್ದಾರೆ. ಇಂತಹ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಅವರನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net