

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಗೆ ಎಂದು ಆಗ್ರಹಿಸಿ ಕವಿವಿ ನಿವೃತ್ತ ಶಿಕ್ಷಕೇತರ ನೌಕರರ ಸಂಘ ಹಾಗೂ ಪಿಂಚಣಿದಾರರ ಸಂಘದಿ0ದ ಆಡಳಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಸಮುದಾಯ ಸಮುದಾಯ, ಕಸಪಾ ಜಿಲ್ಲಾ ಘಟಕ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದವು.
ಸರ್ಕಾರ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ನೀಡುತ್ತಿಲ್ಲ. ಇದರಿಂದ 1,800 ನಿವೃತ್ತ ನೌಕರರಿಗೆ ನಿಯಮಿತವಾಗಿ ಪಿಂಚಣಿ ಪಾವತಿಯಾಗುತ್ತಿಲ್ಲ. ಸ್ವಾಯತ್ತ ಸಂಸ್ಥೆ ಎನ್ನುವ ಸರ್ಕಾರ ಕುಲಪತಿ, ಕುಲಸಚಿವ ಹಾಗೂ ಸಿಂಡಿಕೇಟ್ ಸದಸ್ಯರು, ಹಣಕಾಸು ಅಧಿಕಾರಿ, ಕುಲಸಚಿವರನ್ನು ರಾಜಕೀಯ ಪ್ರೇರಿತವಾಗಿ ನೇಮಕ ಮಾಡುತ್ತಿದೆೆ. ಆಡಳಿಧಿಕಾರವನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸರ್ಕಾರ ಅನುದಾನ ನೀಡದೇ ನಿರ್ಲಕ್ಷಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿ ತಿಂಗಳು ಎಚ್‌ಆರ್‌ಎಂಎಸ್ ಮೂಲಕ ಪಿಂಚಣಿ ಪಾವತಿಸಬೇಕು. ಸರ್ಕಾರಿ ನೌಕರರಂತೆ ಆರೋಗ್ಯ ಸೌಲಭ್ಯ, ಹೆಚ್ಚುವರಿ ಪಿಂಚಣಿ, ಹಣಕಾಸಿನ ಸೌಲಭ್ಯಗಳನ್ನು ನೇರವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಕವಿವಿ ನಿವೃತ್ತ ಶಿಕ್ಷಕೇತರ ನೌಕರರ ಸಂಘ ಅಧ್ಯಕ್ಷ ಜಿ.ಎಸ್. ಬ್ಯಾಡಗಿ, ಪಿಂಚಣಿದಾರರ ಸಂಘದ ಅಧ್ಯಕ್ಷ ಎಸ್.ಜಿ. ಹುಡೆದ, ಎನ್.ಎಂ. ಅನ್ಸಾರಿ, ಮೋಹನ ಸಿದ್ಧಾಂತಿ, ಕೆ.ಡಿ. ಪೂಜಾರಿ, ಎಸ್.ಬಿ. ಹಿರೇಮಠ, ಎಂ.ವಿ. ಜಾಲಿಹಾಳ, ಎಸ್.ಎಸ್. ಕಲಘಟಗಿ, ಬಿ.ಐ. ಈಳಿಗೇರ, ಲಿಂಗರಾಜ ಅಂಗಡಿ, ಆರ್.ಬಿ. ಪಾಟೀಲ, ಇತರರಿದ್ದರು.