

ಹುಬ್ಬಳ್ಳಿ: ಇಲ್ಲಿಯ ನವನಗರ ಬಳಿಯ ಹೆಸ್ಕಾಂ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಲಾಯಿತು.
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ರೈತ ಮುಖಂಡರಾದ ಚುನಪ್ಪ ಪೂಜೇರಿ, ಮಹೇಶ ಸುಬೇದಾರ, ರಾಜು ಪವಾರ, ಪಾರುಕ್ ಕಿಲ್ಲೇದಾರ, ವಿಜಯಕುಮಾರ ಸುಂಕದ, ಬಸವರಾಜ ಕರಿಗಾರ, ಆಶಾ ಜೂಟದಾರ, ಇತರರು ಇದ್ದರು.