13ಕ್ಕೆ ಟೆಂಪೋ ಸ್ಟಾ ್ಯಂಡ್ ಬಳಿ ಪ್ರತಿಭಟನೆ

9 smg Nazeer ahammad
Published on

ಶಿವಮೊಗ್ಗ: ನಗರದ ಎನ್.ಟಿ.ರಸ್ತೆ ಟೆಂಪೋ ಸ್ಟಾ÷್ಯಂಡ್ ವೃತ್ತ ಸೇರಿ ಅನೇಕ ಕಡೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯಿಂದ ಫೆ.13ರಂದು ಎನ್.ಟಿ.ರಸ್ತೆ ಟೆಂಪೋ ಸ್ಟಾ ್ಯಂಡ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್ ಹೇಳಿದರು.
ಟೆಂಪೋ ಸ್ಟಾ÷್ಯಂಡ್ ಬಳಿ ದಿನೇದಿನೆ ವಾಹನ ದಟ್ಟಣೆ ಹೆಚ್ಚುತ್ತಿದ್ದು ಸಂಚಾರ ಅವ್ಯವಸ್ಥೆಯಿಂದ ಕೂಡಿದೆ. ವೃತ್ತದ ಬಳಿ ಪೊಲೀಸರೂ ಇರುವುದಿಲ್ಲ. ಈ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಇಲ್ಲದಿರುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಲೇ ಇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗಾಡಿಕೊಪ್ಪ, ಟೆಂಪೋ ಸ್ಟಾ÷್ಯಂಡ್, ಸೂಳೇಬೈಲು, ನ್ಯೂಮಂಡ್ಲಿ, ಆಲ್ಕೊಳ, ಎಂ.ಆರ್.ಎಸ್.ಸರ್ಕಲ್ ಸೇರಿ ಹಲವು ಭಾಗಗಳಲ್ಲಿ ಅತಿ ಹೆಚ್ಚು ವಾಹನ ಸಂಚಾರವಿದೆ. ಈ ಎಲ್ಲ ಭಾಗಗಳಲ್ಲಿ ಶಾಲೆಗಳು, ಆಸ್ಪತ್ರೆಗಳಿವೆ. ಆಂಬುಲೆನ್ಸ್ಗಳು ಓಡಾಡುತ್ತಿರುತ್ತವೆ. ಪಾದಾಚಾರಿಗಳು, ವೃದ್ಧರು, ಮಹಿಳೆಯರು ಅತಿ ಹೆಚ್ಚಾಗಿ ಓಡಾಡುವುದರಿಂದ ಕಿರಿಕಿರಿಯಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಜಿಲ್ಲಾಽಕಾರಿಗಳು, ಟ್ರಾಫಿಕ್ ಪೊಲೀಸರು ಗಮನಿಸಿ ಸೂಕ್ತ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಗಮನಹರಿಸಬೇಕು ಎಂದರು. ಪ್ರಮುಖರಾದ ಎಜಾಜ್ ಅಹಮ್ಮದ್, ಆರೀ-ï ಬೇಗ್, ಹರೀಶ್, ಸಕೀರ್ ಅಹಮ್ಮದ್, ಎನ್.ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net