ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ

1 - Copy
Published on


ಮೈಸೂರು:
ಸಂವಿಧಾನಕ್ಕೆ ವಿರುದ್ಧವಾಗಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿಸಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯಿಂದ ಶುಕ್ರವಾರ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.


ಲಂಚಮುಕ್ತ ದೇಶ ನಿರ್ಮಾಣವಾಗಬೇಕೆಂದರೆ ಸರ್ಕಾರದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಂದ ಸಾಧ್ಯವಿಲ್ಲ. ಭ್ರಷ್ಟಾಚಾರಕ್ಕೆ ಮೂಲ ಕಾರಣ ನಾಗರಿಕರಲ್ಲಿ ಇರುವ ಅತಿಯಾದ ಆಸೆ, ಸ್ವಾರ್ಥ ಸಾಧನೆ. ಇದಕ್ಕಾಗಿ ಲಂಚ ನೀಡುತ್ತಾರೆ. ಸಾರ್ವಜನಿಕರು ಆಸೆಬಿಟ್ಟು ಪ್ರಾಮಾಣಿಕ ಜೀವನ ನಡೆಸಿದರೆ ಭ್ರಷ್ಟಾಚಾರ ತೊಲಗಿಸಬಹುದು. ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಕಂಡುಬಂದಾಗ ನಾಗರಿಕರು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಭ್ರಷ್ಟಾಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಸಂಚಾಲಕ ರಾಜೇಶ್ ಗಡಿ, ಮೈಸೂರು ಹೃದಯವಂತ ಕನ್ನಡಿಗರ ಬಳಗದ ಅಧ್ಯಕ್ಷ ಡಿಪಿಕೆ ಪರಮೇಶ್, ರವಿ, ವೆಂಕಟೇಶ್, ಮಹದೇವಸ್ವಾಮಿ, ಶ್ರೀನಿವಾಸ್, ಕುಮಾರ್, ಸಿದ್ದೇಗೌಡ, ರವಿಕಾಂತರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net