ಒಳಮೀಸಲಿಗಾಗಿ ಆ.1ರಂದು ಡಿಸಿ ಕಚೇರಿಗಳ ಬಳಿ ಪ್ರತಿಭಟನೆ

Untitled-2
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಮಾದಿಗ ಸಂಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿದರು. ಮುಖಂಡರಾದ ಬುಳ್ಳಹಳ್ಳಿ ಎಂ.ರಾಜಪ್ಪ, ಈರಪ್ಪ ಇತರರು ಇದ್ದರು.
Published on

ದೇವನಹಳ್ಳಿ : ನ್ಯಾಯಾಲಯದ ಆದೇಶವಿದ್ದರೂ ಒಳ ಮೀಸಲುಜಾರಿಗೊಳಿಸಲು ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಮೊದಲ ಹಂತವಾಗಿ ಆ.1 ರಂದು ರಾಜ್ಯದ ಎಲ್ಲ ಡಿಸಿ ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಮಾದಿಗ ಸಂಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮಾಂತರ ಜಿಲ್ಲೆಯ ಚಪ್ರಕಲ್​ ಕ್ರಾಸ್​ನಿಂದ ಸರ್ಕಾರದ ಅಣುಕು ಶವಯಾತ್ರೆ ನಡೆಸಿ ಬೀರಸಂದ್ರದ ಜಿಲ್ಲಾಡಳಿತ ಭವನದ ಮುಂದೆ ಅಂದು ಅರೆ ಬೆತ್ತಲೆ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಬೇರೆ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಾದರೂ ನಮ್ಮ ರಾಜ್ಯದಲ್ಲಿಇನ್ನೂ ಜಾರಿಯಾಗದಿರುವುದು ಅನುಮಾನಾಸ್ಪದವಾಗಿದೆ ಎಂದ ಅವರು, ಪಾರದರ್ಶಕತೆಯಿಂದ ಜಾತಿ ಸಮೀೆ ನಡೆದಿಲ್ಲ. ಸರ್ಕಾರಿ ಮೀಸಲಾತಿಗಳಲ್ಲಿ ವಂಚಿತರಾಗಿರುವ ವರ್ಗಗಳನ್ನು ಗುರುತಿಸಬೇಕು. ರಾಜ್ಯ ಸರ್ಕಾರವೂ ಇತರ

ರಾಜಕೀಯ ಪಕ್ಷಗಳಂತೆ ಜನರ ದಿಕ್ಕುತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಆ.15ರೊಳಗೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡದಿದ್ದರೆ ಮಾದಿಗ ಒಕ್ಕೂಟಗಳಿಂದ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ಮೂಲಕ ಕರ್ನಾಟಕ ಬಂದ್​ ಮಾಡುತ್ತೇವೆ ಎಂದರು.

ಆ.1 ರ ಪ್ರತಿಭಟನೆಗೆ ಸರ್ಕಾರ ಪ್ರತಿಕ್ರಿಯಿಸದಿದ್ದರೆ, ಆ.10 ರಿಂದ 15ರವರೆಗೆ ರಾಜ್ಯದ ಎಲ್ಲ ಮಾದಿಗ ಸಂಟನೆಯ ಮುಖಂಡರೊಂದಿಗೆ

ಚರ್ಚಿಸಿ ಅಸಹಕಾರ ಚಳವಳಿ ಮಾಡಲಿದ್ದೇವೆ. ಶೋಷಿತರ ನೋವು ಸಮಾಜಕ್ಕೆ ಗೊತ್ತಾಗಬೇಕಾಗಿರುವ ಅನಿವಾರ್ಯತೆ ಇದೆ. ಇದುವರೆಗೂ ಕಾಂಗ್ರೆಸ್​ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಪ್ರಾಯೋಗಿಕ ಅಂಕಿ&ಅಂಶಗಳನ್ನು ಸರ್ಕಾರ ಸಂಗ್ರಹಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

ಒಳಮೀಸಲಾತಿಗೆ ಮನೆ ಮನೆ ಜಾತಿ ಸಮೀೆಗೆ ತಯಾರಿಸಿದ್ದ 11 ಲಕ್ಷ ಸ್ಟಿಕ್ಕರ್​ಗಳನ್ನು ತಿಪ್ಪೆಗೆ ಎಸೆದಿದ್ದಾರೆ. ಸರಿಯಾಗಿ ಸರ್ವೇ ಮಾಡಲು ಸರ್ಕಾರದಿಂದ ಆಗಿಲ್ಲ.ಇದೇ ರೀತಿ ಮುಂದುವರಿದರೆ ಆ.17 ರ ಬಳಿಕ ಕರ್ನಾಟಕ ಬಂದ್​ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಮಾದಿಗ ದಂಡೋರ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಳ್ಳಿ ಎಂ.ರಾಜಪ್ಪ, ಜಿಲ್ಲಾಧ್ಯಕ್ಷ ಈರಪ್ಪ,

ತಾಲೂಕು ಅಧ್ಯಕ್ಷ ಎ.ಎಂ.ವೆಂಕಟೇಶ್​, ದೇವರಾಜ್​, ವೇಣು, ಕುಮಾರ್​, ವಿಜಯ್​ ಕುಮಾರ್​, ಮುನಿರಾಜು, ಮಾರಪ್ಪ ಹಾಗೂ ತಾಲೂಕಿನ ಹಲವು ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net