ಕಿನ್ನಿಗೋಳಿಯಲ್ಲಿ ಪ್ರತಿಭಟನಾ ಸಭೆ

Kin_Protest
Published on

ಕಿನ್ನಿಗೋಳಿ: ಮೂಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿ ಎಂದು ಸಾಬೀತಾಗಿದೆ. ಆದರೂ ರಾಜೀನಾಮೆ ಕೊಡದೆ ಮುಂದುವರಿಯುತ್ತಿರುವುದು ದುರದೃಷ್ಟಕರ ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉವಾನಾಥ ಕೋಟ್ಯಾನ್ ಹೇಳಿದರು.

ಅವರು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಮೂಲ್ಕಿ - ಮೂಡುಬಿದಿರೆ ಮಂಡಲದ ವತಿಯಿಂದ ಕಿನ್ನಿಗೋಳಿ ಸುಖಾನಂದ ಶೆಟ್ಟಿ ವೃತ್ತದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ವಾತನಾಡಿದರು.

ವಾಲ್ಮೀಕಿ ಹಗರಣದಲ್ಲಿ ಮುಳುಗಿರುವ ಸರ್ಕಾರ, ಎಸ್.ಸಿ., ಎಸ್.ಟಿ.ಗೆ ಮೀಸಲಿರಿಸಿದ 25 ಕೋಟಿ ರೂ ಹಣವನ್ನು ಗ್ಯಾರಂಟಿ ಯೋಜನೆಗೆ ವಿನಿಯೋಗಿಸಿದ್ದು, ಸರ್ಕಾರ ಸಂಪೂರ್ಣ ಭ್ರಷ್ಟವಾಗಿದೆ ಎಂದರು.

ದಿನೇಶ್ ಪುತ್ರನ್, ಸುನೀಲ್ ಆಳ್ವ, ಅಭಿಲಾಷ್ ಶೆಟ್ಟಿ ಕಟೀಲು, ಭುವನಾಭಿರಾಮ ಉಡುಪ, ಶಾಂತಿ ಪ್ರಸಾದ್ ಹೆಗ್ಡೆ, ಕಸ್ತೂರಿ ಪಂಜ, ಜೀವನ್ ಅಂಗಾರಗುಡ್ಡೆ, ವಿಠಲ್ ಮೂಲ್ಕಿ, ಈಶ್ವರ್ ಕಟೀಲು, ರಂಜಿತ್ ಮೂಡುಬಿದಿರೆ, ಸುಂದರ ನಿಡ್ಡೋಡಿ, ಕೇಶವ ಕರ್ಕೇರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net