ರೈತರ ಬದುಕಿಗಾಗಿ ಹೋರಾಟ : ಕಿಶೋರ್ ಶಿರಾಡಿ ಅಭಿಮತ

New Project (1)
Published on

ಸುಳ್ಯ: ಸರ್ಕಾರ ಕಸ್ತೂರಿ ರಂಗನ್ ಜಾರಿಯಂಥ ಜನವಿರೋಧಿ ಕಾನೂನುಗಳನ್ನು ತರುವ ಮೂಲಕ ರೈತರ ಬದುಕನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.

ದ.ಕ ಜಿಲ್ಲಾ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವತಿಯಿಂದ ಸುಳ್ಯದ ವಲಯ ಅರಣ್ಯ ಇಲಾಖಾ ಕಚೇರಿಯ ಮುಂಭಾಗದಲ್ಲಿ ಶನಿವಾರ ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ವೇದಿಕೆಯ ಸುಳ್ಯ ತಾಲೂಕು ಸಂಚಾಲಕ ಚಂದ್ರಶೇಖರ ಬಾಳುಗೋಡು, ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ಸಯ್ಯದ್ ಮೀರಾ ಸಾಹೇಬ್, ಹರಿಪ್ರಸಾದ್ ಪಾನತ್ತಿಲ, ತೀರ್ಥರಾಮ ನೆಡ್ಚಿಲ್, ಎ.ಜಿ.ಕರುಣಾಕರ, ಪಿ.ಎಸ್.ಗಂಗಾಧರ, ಸುರೇಶ್ ಎಂ.ಎಚ್., ಪುರುಷೋತ್ತಮ, ಜಯಪ್ರಕಾಶ್, ಅಶೋಕ್ ಪೀಚೆ, ಚಿತ್ರಾ ಕುಮಾರಿ, ಅನಿಲ್ ಕೆ.ಸಿ.ಪರಿವಾರಕಾನ, ಗೀತಾ, ದಾಮೋದರ, ಜನಾರ್ದನ ಚೊಕ್ಕಾಡಿ, ತೀರ್ಥರಾಮ ಕೆದಂಬಾಡಿ, ಚಂದ್ರಶೇಖರ ಬಾಳೆಕಜೆ, ವೇಣುಪ್ರಸಾದ್ ಪೆತ್ತಾಜೆ, ಪ್ರಸನ್ನ ಅಜ್ಜನಗದ್ದೆ, ಕೊರಗಪ್ಪ ಮಣಿಯಾಣಿ, ತಿಮ್ಮಯ್ಯ, ರಾಜರಾಮ, ರವಿ ತೊಡಿಕಾನ, ಹುಕ್ರಪ್ಪ, ಧರ್ಮಪಾಲ, ವೆಂಕಟ್ರಮಣ ಸಭೆಯಲ್ಲಿದ್ದರು. ಅರಣ್ಯ ಇಲಾಖಾ ಕಚೇರಿಗೆ ತೆರಳಿ ರೇಂಜರ್ ಮಂಜುನಾಥ್‌ಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net