ನವಲಗುಂದದಲ್ಲಿ ಪ್ರತಿಭಟನಾ ಮೆರವಣಿಗೆ

MANAVI NVL
Published on

ನವಲಗುಂದ: ಇತ್ತೀಚೆಗೆ ಬೆಂಗಳೂರಿನ ಶಿವಾಜಿನಗರದ ಕಲ್ಯಾಣ ಕೇಂದ್ರದಲ್ಲಿ ವೃತಿಪರ ಛಾಯಾಗ್ರಾಹಕರು ಕಾರ್ಯ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಹಲ್ಲೆ ಮಾಡಿ ಬೆಲೆಬಾಳುವ ಕ್ಯಾಮರಾಗಳನ್ನು ಕಿತ್ತೊಗೆದು ಹಾನಿಗೈದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ತಾಲೂಕಾಧ್ಯಕ್ಷ ಸುರೇಶ ಬಾಂಡಗೆ ಮಾತನಾಡಿ, ದಶಕಗಳಿಂದ ನಿರಂತರವಾಗಿ ಫೋಟೋಗ್ರಫಿಯನ್ನು ನಮ್ಮ ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತ ಬಂದಿದ್ದೇವೆ. ಆದರೆ, ಇಂದಿನ ದಿನನಗಳಲ್ಲಿ ಛಾಯಾಗ್ರಾಹಕರ ಮೇಲೆ ಹಲ್ಲೆ ಹಾಗೂ ಕ್ಯಾಮರಾಗಳ ಕಳ್ಳತನ ಮತ್ತು ರಸ್ತೆಯಲ್ಲಿ ತಡೆದು ಕ್ಯಾಮರಾ ಕಸಿದುಕೊಂಡ ಪ್ರಕರಣಗಳು ನಡೆಯುತ್ತಲೇ ಇವೆ. ಈ ಕುರಿತು ದೂರು ನೀಡಿದರೂ ಛಾಯಾಗ್ರಾಹಕರಿಗೆ ಇನ್ನೂವರೆಗೂ ನ್ಯಾಯ ದೊರಕಿಲ್ಲ. ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯದರ್ಶಿ ನಾಗೇಶ ದನ್ಮರು, ಸಿದ್ದು ಬಸಾಪುರ, ಮಂಜುನಾಥ ಬಿಜಾಪುರ, ರಾಘವೇಂದ್ರ ರಾಯಬಾಗಿ, ಅಂದನಯ್ಯ ಹಿರೇಮಠ, ಶಂಭು ಬಿರೊಳ್ಳಿ, ಆನಂದ ಕಾಳೆ, ಮುತ್ತು ಪವಾರ, ಜಾವೀದ್ ನದಾಫ್, ಜನಾರ್ದನ ಬನ್ನಿಕೊಪ್ಪ, ಯಮನೂರ ವಡ್ಡರ, ಸದಾಶಿವ ನಾಗನೂರು, ಶಿವು ಪೂಜಾರ, ಮಂಜು ಚಲವಾದಿ, ರಾಕೇಶ ಕರಿಗೌಡ, ರಾಚೋಟಿ ಕಾತ್ರಾಳ, ಸಚಿನ ಗುರ್ಲಹೊಸೂರು ಚೇತನ ಉಣಕಲ್ಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net