ಮುಂಡಗೋಡದಲ್ಲಿ ಪ್ರತಿಭಟನಾ ಮೆರವಣಿಗೆ

JAIN PROTEST
Published on

ಮುಂಡಗೋಡ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಜೈನ ಸಮುದಾಯದ ಕಾಮಕುಮಾರ ನಂದಿ ಮುನಿಮಹಾರಾಜರ ಹತ್ಯೆಯಾಗಿರುವುದನ್ನು ಖಂಡಿಸಿ ತಾಲೂಕು ಜೈನ ಸಮಾಜದವರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

ನಮ್ಮ ಸಮುದಾಯದ ಸ್ವಾಮೀಜಿಯನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕೊಲೆ ಮಾಡಿರುವುದು ಖಂಡನೀಯ. ಇಂತಹ ಅಹಿತಕರ ಘಟನೆಗಳು ನಾಗರಿಕ ಸಮಾಜದ ಮೇಲೆ ದುಷ್ಪರಿ ಣಾಮ ಬೀರು ತ್ತದೆ. ಮುನಿಶ್ರೀ ಗಳನ್ನು ಹತ್ಯೆ ಮಾಡಿದ ಆರೋಪಿ ಗಳಿಗೆ ಕಠಿಣ ಶಿಕ್ಷೆ ನೀಡ ಬೇಕು ಹಾಗೂ ನಾಡಿನಾ ದ್ಯಂತ ಇರುವ ಎಲ್ಲ ಧರ್ಮದ ಮಠಾಧೀಶರಿಗೂ ಹಾಗೂ ಜೈನ ಮುನಿಗಳಿಗೆ ರಕ್ಷಣೆ ಒದಗಿಸಬೇಕು. ಮುನಿಶ್ರೀಗಳು ಹಾಗೂ ಅಧ್ಯಾತ್ಮ ಪ್ರವರ್ತಕರು, ಶಾಂತಿಪ್ರಿಯರು ಹಾಗೂ ಅಹಿಂಸೆಯ ಪ್ರತಿಪಾದಕರಾಗಿರುತ್ತಾರೆ. ಜೈನ ಮುನಿಗಳಿಗೆ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ನೀಡುವಂತಾಗಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಚಂದ್ರಪ್ರಭ ತೀರ್ಥಂಕರ ಜಿನ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ವಿುಸಿ ಕೆಲ ಸಮಯ ಪ್ರತಿಭಟಿಸಿ ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಡಿ.ಎ. ಅಂಗಡಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜೈನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net