ಕಾಸರಗೋಡಲ್ಲಿ ಪ್ರತಿಭಟನಾ ಮೆರವಣಿಗೆ

20
Published on

ಕಾಸರಗೋಡು: ರಾಜ್ಯ ಶಿಕ್ಷಣ ಇಲಾಖೆ ಸಚಿವ ಸಂಪುಟದ ಅರಿವಿಗೆ ಬಾರದೆ ಪಿಎಂಶ್ರೀ ಯೋಜನೆಯನ್ನು ರಹಸ್ಯವಾಗಿ ಅನುಷ್ಠಾನಗೊಳಿಸುತ್ತಿರುವುದು ಎಡಪಂಥೀಯ ನೀತಿಗಳಿಗೆ ಸವಾಲಾಗಿದೆ ಎಂದು ಎಐವೈಎಫ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ.ಶ್ರೀಜಿತ್ ಹೇಳಿದರು.

ಕೇರಳದಲ್ಲಿ ಪಿಎಂಶ್ರೀ ಯೋಜನೆ ಜಾರಿಗೆ ತರದಂತೆ ಎಐವೈಎಫ್, ಎಐಎಸ್‌ಎಫ್ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕಾಸರಗೋಡು ಹಳೇ ಬಸ್ ನಿಲ್ದಾಣ ಆವರಣದಿಂದ ಆರಂಭಗೊಂಡ ಮೆರವಣಿಗೆ ನಗರದ ವಿವಿಧ ಕೇಂದ್ರಗಳ ಮೂಲಕ ಸಂಚರಿಸಿ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಸಮಾರೋಪಗೊಂಡಿತು. ಸಾರ್ವಜನಿಕ ಸಭೆಯಲ್ಲಿ ಶ್ರೀಜಿತ್ ಕುತ್ತಿಕೋಲ್, ಡ್ಯಾನಿಶ್ ಬೀರಿಕುಳಂ, ಪ್ರಕಾಶನ್ ಪಳ್ಳಿಕ್ಕಾಪ್ಪಿಲ್, ದಯಾ ಕರ್ಮಡ, ದಿಲೀಶ್ ಕೆ.ವಿ., ಎಐಎಸ್‌ಎಫ್ ಪ್ರಧಾನ ಕಾರ್ಯದರ್ಶಿ ಪ್ರಭಿಜಿತ್, ಉಣ್ಣಿಕೃಷ್ಣನ್ ಮಡಿಕ್ಕಲ್, ಜಿ.ವಿಷ್ಣು, ನಿತಿನ್ ಇಡಯಿಲಕಾಡ್, ರಾಕೇಶ್ ರಾವಣೇಶ್ವರಂ, ಜಿನುಶಂಕರ್, ನವೀನ್ ತಲಕ್ಲಾಯಿ, ಹರಿದಾಸ್ ಪೆರುಂಬಳ ಮತ್ತಿತಲರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net