ಮದ್ದೂರು ಇಒ, ಚಿಕ್ಕರಸಿನಕೆರೆ ಪಿಡಿಒ ವಿರುದ್ಧ ಪ್ರತಿಭಟನೆ

Protest)
Published on

ಮಂಡ್ಯ: ಮದ್ದೂರು ಇಒ ಸಂದೀಪ್ ಮತ್ತು ಚಿಕ್ಕರಸಿನಕೆರೆ ಪಿಡಿಒ ನಾಗೇಶ್ ಕರ್ತವ್ಯಲೋಪ ಎಸಗಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಡಿಸಿ ಕಚೇರಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ಮದ್ದೂರು ತಾಲೂಕು ಚಿಕ್ಕರಸಿನಕೆರೆ ದಲಿತ ಕಾಲನಿಯ ತೇರು ರಸ್ತೆಯನ್ನು ಸರ್ವಣಿಯರು ಅಕ್ರಮ ಒತ್ತುವರಿವಾಗಿ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ಅಧಿಕಾರಿಗಳ ಸರಿಯಾದ ಕ್ರಮ ವಹಿಸುತ್ತಿಲ್ಲವೆಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಮಾಡಿಸಬೇಕು. ಅಮೃತ್ ಜಲಧಾರೆ ಮಿಷನ್ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಬೇಕು. ವಿದ್ಯುತ್, ಶೌಚಗೃಹ ನಿರ್ಮಾಣ ಸೇರಿದಂತೆ ರಸ್ತೆ, ಚರಂಡಿಯನ್ನು ಮಂಜೂರಾಗಿರುವ ಅನುದಾನವನ್ನು ಬಳಕೆ ಮಾಡುವುದರ ಜತೆಗೆ ಮೂಲ ಸೌಕರ್ಯ ಕಲ್ಪಿಸಬೇಕು. ಕರ್ತವ್ಯಲೋಪ ಮಾಡಿರುವ ಅಧಿಕಾರಿಗಳು ಹಾಗೂ ಒತ್ತುವರಿ ಮಾಡಿಕೊಂಡಿರುವ ಸರ್ವಣಿಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಶ್ರೀನಿವಾಸ್ ಕಬ್ಬಿನಕೆರೆ, ಸುರೇಶ್‌ಕುಮಾರ್, ಆನಂದ, ಮಾರಪ್ಪ, ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net