

ಮಂಡ್ಯ: ಪಿಂಚಣಿ ಮೊತ್ತ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಸಮಿತಿ ಪದಾಧಿಕಾರಿಗಳು, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. 30-35 ವರ್ಷದ ಸೇವೆ ಸಲ್ಲಿಸಿದ ನಮಗೆ ತಿಂಗಳಿಗೆ 2000 ರೂ ಪಿಂಚಣಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊತ್ತ ಹೆಚ್ಚಿಸುವಂತೆ ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಆದ್ದರಿಂದ 7,500 ರೂ.ಗಳ ಪಿಂಚಣಿ ಹೆಚ್ಚಳ ಮಾಡಬೇಕು. ಏರುತ್ತಿರುವ ಹಣದುಬ್ಬರದ ಅನ್ವಯ ಮಧ್ಯಂತರ ಪರಿಹಾರವಾಗಿ 5 ಸಾವಿರ ರೂ ಮತ್ತು ತುಟ್ಟಿ ಭತ್ಯೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಶೋಕ್ ರಾವತ್, ಹುಚ್ಚಪ್ಪ, ವೀರೇಂದ್ರ ಸಿಂಗ್, ಬಾಲಕೃಷ್ಣ, ಶಿವಣ್ಣ, ಮಹದೇವಸ್ವಾಮಿ, ಶ್ರೀನಿವಾಸ, ನಾಗಾರಾಜುಮೂರ್ತಿ, ಶಿವಲಿಂಗಪ್ಪ, ದೇವರಾಜ್, ಪುರುಷೋತ್ತಮ ಇತರರಿದ್ದರು.