ವೃಷಭಸೇನ ಭಟ್ಟಾರಕ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ

10sor1
ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸೊರಬ ತಹಸೀಲ್ದಾರ್ ಹುಸೇನ್ ಸರಕಾವಸ್ ಅವರಿಗೆ ಮನವಿ ಸಲ್ಲಿಸಲಾಯಿತು. ನಾಗರಾಜ ಜೈನ್ ಸೊರಬ , ರಾಜೇಂದ್ರ, ಸುರೇಶ್ ವೀರಾಪುರ, ಸೋಮಪ್ಪ ಜೈನ್ ಇತರರಿದ್ದರು.
Published on

ಸೊರಬ: ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿದ ಜೈನಮುನಿಗಳಾದ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆ ಮಾಡಿರುವುದು ೋರ ಅಪರಾಧ ಎಂದು ಆಗ್ರಹಿಸಿ ಲಕ್ಕವಳ್ಳಿಯ ಮೋಕ್ಷ ಮಂದಿರ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಆಗ್ರಹಿಸಿದರು.

ಸೋಮವಾರ ತಲಗಡ್ಡಿಯ 1008 ಶ್ರೀ ಶಾಂತಿನಾಥ ತೀರ್ಥಂಕರ ಹಾಗೂ ಶ್ರೀ ನಿರ್ವಾಹಣ ಸ್ವಾಮಿ ದಿಗಂಬರ ಸೇವಾ ಸಂಸ್ಥೆ, ಲಕ್ಕವಳ್ಳಿಯ ಸರ್ವ ಧರ್ಮ ಪ್ರಚಾರ ವಿದ್ಯಾ ಸಮಿತಿ ಶ್ರೀ ಮೋಕ್ಷ ಮಂದಿರ ಸಂಸ್ಥಾನ ಜೈನಮಠದ ನೇತೃತ್ವದಲ್ಲಿ ಸಮಾಜದ ಪ್ರಮುಖರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಹುಸೇನ್ ಸರಕಾವಸ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಅತ್ಯಂತ ಹಿಂಸಾತ್ಮಕವಾಗಿ ಹತ್ಯೆ ಮಾಡಿದ್ದು, ಜೈನ ಸಮಾಜ ಹಾಗೂ ಮನುಕುಲಕ್ಕೆ ಆಘಾತ ಉಂಟುಮಾಡಿದೆ. ಈ ರೀತಿಯ ಘಟನೆಗಳು ಜೈನ ಸಮಾಜ ಹಾಗೂ ನಾಗರಿಕರಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಈ ರೀತಿಯ ಘಟನೆಗಳನ್ನು ನಮ್ಮ ಸಮಾಜ ಖಂಡಿಸುತ್ತದೆ ಎಂದರು.
ನಾಗರಾಜ ಜೈನ್ ಸೊರಬ , ರಾಜೇಂದ್ರ, ಸುರೇಶ್ ವೀರಾಪುರ, ಸೋಮಪ್ಪ ಜೈನ್, ಸೋಮಪ್ಪ ಆಲಹಳ್ಳಿ, ನಾಗರಾಜ ಆಲಹಳ್ಳಿ, ಬಿ.ಭೋಪಾಲಪ್ಪ ಜೈನ್, ಚಂದ್ರಶೇಖರ್ ಜೈನ್, ಜೈಪಾಲ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net