

ವಿಜಯವಾಣಿ ಸುದ್ದಿಜಾಲ ಉಡುಪಿ
ಸಾಮಾಜಿಕೆ ಸಮೀಕ್ಷಾ ಕಾರ್ಯದಲ್ಲಿ ಅನಾರೋಗ್ಯ ಪೀಡಿತ ಅಂಗನವಾಡಿ ನೌಕರರಿಗೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಮಹಿಳೆಯರು ಸೋಮವಾರ (ಸೆ.29) ದಿಢೀರ್ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳು ಬೆದರಿಕೆ ಹಾಕುತ್ತಿರುವುದರಿಂದ ಮಹಿಳೆಯರು ಮಾನಸಿಕವಾಗಿ ನೊಂದಿದ್ದಾರೆ. ಸ್ಥಳೀಯವಾಗಿ ಸಮೀಕ್ಷೆಗೆ ಅವಕಾಶ ನೀಡದೆ ಬೇರೆ ಬೇರೆ ದೂರದ ಗ್ರಾಮಗಳಿಗೆ ನಿಯೋಜಿಸಿದ್ದರಿಂದ ಅಂಗನವಾಡಿ ನೌಕರರಿಗೆ ಸಮಸ್ಯೆಯಾಗಿದೆ. ಇದರೊಂದಿಗೆ ಎಫ್ಎಸ್ಆರ್, ಬಿಎಲ್ಒ ಕೆಲಸಗಳನ್ನು ಮಾಡಬೇಕೆಂದು ನೋಟಿಸ್ ನೀಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಸಹ ಮಹಿಳೆಯರನ್ನು ಗುಲಾಮರಂತೆ ದುಡಿಸುತ್ತಿದ್ದು, ಅವರ ಆರೋಗ್ಯ ಹದಗೆಡುತ್ತಿದೆ ಎಂದು ಆರೋಪಿಸಿದರು.
ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯೆ ಭಾರತಿ, ಯಶೋದಾ ಕೆ., ಆಶಾಲತಾ, ಶಾಂತಾ, ಪ್ರೇಮಾ, ಪ್ರಮೀಳಾ ಉಡುಪಿ, ಜಯಲಕ್ಷ್ಮೀ, ಸರೋಜಾ, ಸರೋಜಿನಿ ಬ್ರಹ್ಮಾವರ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ ಕಲ್ಲಾಗರ, ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಜಿಲ್ಲಾ ಕೋಶಾಧಿಕಾರಿ ಕವಿರಾಜ ಎಸ್. ಕಾಂಚನ್ ಇತರರಿದ್ದರು.