ರೈತ ವಿರೋಧಿ ಕಾಯ್ದೆ ಕೈ ಬಿಡಿ ; ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರ ಪ್ರತಿಭಟನೆ

27TMK_Raitha_CPI_Protest
Published on

ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಸಂದ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಮೆಳೇಕಲ್ಲಹಳ್ಳಿ ಯೋಗೀಶ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ರೈತರ ಬದುಕು ಕಿತ್ತುಕೊಳ್ಳಲು ಹೊರಟಿವೆ ಎಂದು ದೂರಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಕಾಯ್ದೆ ಖಾಸಗೀಕರಣ, ದಲಿತ ವಿರೋಧಿ ನೀತಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳನ್ನು ಈ ಕೂಡಲೇ ಕೈ ಬಿಡಬೇಕು. ಇಲ್ಲದಿದ್ದರೆ ಇದರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರೊ.ನಂಜುಂಡಸ್ವಾಮಿ ಅವರ ಹೆಸರಿನಲ್ಲಿ ಸಂಟನೆ ನೊಂದ ರೈತರ ಪರವಾಗಿ ಸಂಘಟನೆ ನಿರಂತರ ಹೋರಾಟ ಮಾಡಲಿದೆ. ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಈ ತಿದ್ದುಪಡಿಗಳನ್ನು ಜಾರಿ ಮಾಡುವ ಮೂಲಕ ರೈತ ದಲಿತ ಕಾರ್ಮಿಕರ ಪಾಲಿಗೆ ಮರಣ ಶಾಸನ ಬರೆದು ರೈತರಿಗೆ ಈ ವಿರೋಧಿ ಕಾಯ್ದೆಗಳನ್ನು ನೇಣು ಹಾಕುವ ಪ್ರಯತ್ನ ವಾಡಲಾಗುತ್ತಿದೆ. ಈ ವಿರೋಧಿ ಕಾಯ್ದೆಗಳನ್ನು ತಕ್ಷಣ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಹತ್ತಿಕ್ಕುವುದು ಖಂಡನೀಯ : ಭಾರತ ಕಮ್ಯೂನಿಸ್ಟ್ ಪಕ್ಷ ನೇತೃತ್ವದಲ್ಲಿ ಪಾರ್ಲಿಮೆಂಟ್ ಚಳವಳಿನಿರತ ರೈತರ ಮೇಲೆ ಜಲ ಪಿರಿಂಗಿ ದಾಳಿ ಖಂಡಿಸಿ ಮತ್ತು ಕೃಷಿ ವಿರೋಧಿ ಭೂಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಾಪಾಸ್ ಪಡೆಯುವಂತೆ ಪ್ರತಿಭಟನೆ ನಡೆಸಲಾಯಿತು.

ಅಖಿಲ ಭಾರತ ರೈತ ಸಂರ್ಷ ಸಮನ್ವಯ ಸಮಿತಿ ಸಂಚಾಲಕ ಸಿ.ಯತಿರಾಜು ಮಾತನಾಡಿ, ರೈತರ ಮೇಲಿನ ದಾಳಿ ಪ್ರಜಾಪ್ರಭತ್ವ ಅಣುಕಿಸುತ್ತಿದೆ. ರೈತರ ಅಭಿಪ್ರಾಯ ಕೇಳುವ ಸಂಯಮ ಪ್ರಧಾನಿ ವಾಡಬೇಕು. ಅದರ ಬದಲು ಪೊಲೀಸ್, ಅರೆಮಿಲಿಟರಿ ಮೂಲಕ ಹೋರಾಟವನ್ನೇ ತುರ್ತು ಪರಿಸ್ಥಿತಿ ೋಸಿಸದೆ ಪ್ರತಿಭಟನೆಗಳನ್ನು ಹತ್ತಿಕ್ಕುವುದು ಖಂಡನೀಯ ಎಂದರು.

ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ವಾತನಾಡಿ, ಎಲ್ಲೆಡೆ ಕಾರ್ಮಿಕರ ಅಖಿಲ ಭಾರತ ಮುಷ್ಕರ ಯಶಸ್ವಿಯಾಗಿದ್ದು, ಕೇಂದ್ರ ರಾಜ್ಯ ಸರ್ಕಾರಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಚುನಾವಣೆಗಳಲ್ಲಿ ಗೆಲ್ಲುವ ತಂತ್ರಗಳಿಗಷ್ಟೇ ಆಸಕ್ತಿ ತೋರುವುದು ಸರಿಯಲ್ಲ ಎಂದರು.

ಸಿಪಿಐಎಂ ಕಾರ್ಯದರ್ಶಿ ಎನ್.ಕೆ ಸುಬ್ರಮಣ್ಯ ಮತ್ತು ಕರ್ನಾಟಕ ಪ್ರಾಂತ ರೈತ ಸಂದ ಸಂಚಾಲಕ ಅಜ್ಜಪ್ಪ, ಸಿಐಟಿಯು ಕಾರ್ಮಿಕ ಸಂಟನೆಯ ಶಂಕರಪ್ಪ ಸುಜಿತ್ ಶಹತಾಜ್, ಲಕ್ಷ್ಮೀಕಾಂತ್ ಇದ್ದರು.

ಪ್ರಧಾನಿ ಮೋದಿ ಕಪ್ಪುಹಣ ಇಲ್ಲದಂತೆ ಮಾಡುತ್ತೇನೆ ಎನ್ನುತ್ತಲೇ ಸುಗ್ರೀವಾಜ್ಞೆಗಳ ಜಾರಿಗೆ ತರುವ ಮೂಲಕ ಕಪ್ಪುಹಣಕ್ಕೆ ಜೀವತುಂಬುತ್ತಿದ್ದಾರೆ. ಚರ್ಚೆಗೆ ಅವಕಾಶ ಕೊಡದೆ ರೈತರ ಅನುವಾನಗಳನ್ನು ಬಗೆಹರಿಸದೆ ದಾಳಿ ಮಾಡುವ ಪ್ರವೃತ್ತಿ ನಿಲ್ಲಿಸಬೇಕು. ಬಿ.ಉಮೇಶ್ ಎಐಕೆಎಸ್‌ಸಿಸಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net